ಉಡುಪಿ: ಜ.13-15-ಬೀಡಿನ ಗುಡ್ಡೆ ರಂಗ ಮಂದಿರದಲ್ಲಿ “ಪವರ್ ಪರ್ಬ”
ಉಡುಪಿ ಜ.10 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ರಜತಮಹೋತ್ಸವ ಸಮೀತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಜಿ.ಟ್ವೆಂಟಿ ಇನ್ ಅರ್ತ್ ಇನ್ ಫ್ಯಾಮಿಲಿ, ಒನ್ ಫ್ಯೂಚರ್ ಇದರ ಸಹಕಾರದೊಂದಿಗೆ ಉಡುಪಿಯ ಪವರ್ ಸಂಸ್ಥೆಯ 4 ನೇ ವರ್ಷದ ಪವರ್ ಪರ್ಬ 2023 ಜ.13 ರಿಂದ 15 ರ ವರೆಗೆ ಉಡುಪಿಯ ಬೀಡಿನ ಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜ.13 ರಂದು ಸಂಜೆ 5.30 ಕ್ಕೆ “ಪವರ್ ಪರ್ಬ” ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಲ್ಪನಾ ಗೋಪಾಲನ್ ಅವರು ಉದ್ಘಾಟಿಸಲಿದ್ದಾರೆ. ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಎಂ.ಎಸ್.ಎಂನ ನಿರ್ದೇಶಕ ದೇವರಾಜ್ ಕೆ., ಡಿಸಿಐ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿಯ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥ ಡಾ.ಎಸ್.ಟಿ. ವಾಸಪ್ಪ, ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಇದರ ಸಿಇಒ ಮತ್ತು ಪವರ್ ನ ಮೆಂಟರ್ ಡಾ. ಎ.ಪಿ. ಆಚಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಜ.15 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಟಿ ನೀತಾ ಅಶೋಕ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಹಾಗೂ ಈ ಮೇಳದಲ್ಲಿ ಆಭರಣಗಳು, ಪೈಟಿಂಗ್ಸ್, ಕರ ಕುಶಲ ವಸ್ತು, ವಸ್ತ್ರ, ಕಾಸ್ಮೆಟಿಕ್ಸ್, ಗೃಹಾಲಂಕಾರ, ಫ್ಯಾಶನ್ ಉತ್ಪನ್ನಗಳು, ಉಪಕರಣಗಳ ಜೊತೆಗೆ ವಿಶೇಷ ಆಕರ್ಷಣೀಯ 125 ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನ ಹಾಗೂ ಮಾರಟಕ್ಕೆ ಮಹಿಳೆಯವರಿಗೆ ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ವಿಶಿಷ್ಟ ಆಹಾರ ಮಳಿಗೆಗಳು ಹಾಗೂ ವಿಶೇಷ ಆಟದ ವಲಯದ ಜೊತೆಗೆ ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪವರ್ ಸಂಸ್ಥೆಯ ಕಾರ್ಯದರ್ಶಿ ಅರ್ಚನಾ ರಾವ್, ಖಜಾಂಚಿ ಪ್ರತಿಭಾ ಆರ್.ವಿ, ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಶೆಟ್ಟಿ, ಜೊತೆ ಕಾರ್ಯದರ್ಶಿ ತೃಪ್ತಿ ನಾಯಕ್ , ಪುಷ್ಪ ಗಣೇಶ್ ರಾವ್ ಉಪಸ್ಥಿತರಿದ್ದರು.