ನಾಪತ್ತೆಯಾಗಿದ್ದ ಗ್ರಾ.ಪಂ ಸದಸ್ಯೆ ಪ್ರಿಯಕರನೊಂದಿಗೆ ಠಾಣೆಗೆ ಹಾಜರ್

ಸುಬ್ರಮಣ್ಯ ಜ.10 : ಪ್ರಿಯಕರನೊಂದಿಗೆ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಭಾರತಿ ಮೂಕಮಲೆ ಅವರು ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಪ್ರಿಯಕರನೊಂದಿಗೇ ತೆರಳಿದ್ದಾರೆ ಎಂದು ವರದಿಯಾಗಿದೆ.

ತನ್ನ ಪ್ರಿಯಕರ ನಂದನ್ ನೊಂದಿಗೆ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾದ ಭಾರತಿ ಮೂಕಮಲೆ ಅವರು, ಹೇಳಿಕೆ ನೀಡಿ ಮತ್ತೆ ನಂದನ್ ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ತಿಂಗಳ ದಿಂದೆ ತನ್ನ ಇಬ್ಬರು ಸಣ್ಣ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಕಾಣೆಯಾಗಿದ್ದ ಭಾರತಿ ಮತ್ತವರ ಪ್ರಿಯಕರ ನಂದನ್ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ತಿಂಗಳ ಹಿಂದೆ ಭಾರತಿ ತಾನು ಪ್ರಿಯಕರನೊಂದಿಗಿರುವುದಾಗಿ ತಿಳಿಸಿದ್ದು ತನ್ನನ್ನು ಹುಡುಕಾಡದಂತೆ ತಿಳಿಸಿ ವಿಡಿಯೋ ಮಾಡಿ ಹರಿಯ ಬಿಟ್ಟದ್ದರು. ಇದರ ನಡುವೆ ಕೂಡಾ ಪೊಲೀಸರು ಅವರನ್ನು ಹುಡುಕಿ ಕರೆತರುವ ಪ್ರಯತ್ನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!