ಪಡುಬಿದ್ರಿ; ಗಾಂಜಾ ಸೇವನೆ ಯುವಕ ಪೊಲೀಸರ ವಶಕ್ಕೆ
ಪಡುಬಿದ್ರಿ (ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಯುವಕನೊಬ್ಬನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಾಪು ತಾಲೂಕಿನ ನಂದಿಕೂರು ಗ್ರಾಮದ ನಂದಿಕೂರು ಪೇಟೆಯಲ್ಲಿ ನಡೆದಿದೆ. ಸುವಿನ್ ಕಾಂಚನ್(23) ಗಾಂಜಾ ಸೇವಿಸುತ್ತಿದ್ದ ಯುವಕ.
ಗಾಂಜಾ ಸೇವನೆ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್ ಅವರು ಸ್ಥಳಕ್ಕೆ ತೆರಳಿದಾಗ ಯುವಕ ಅಮಲಿನಲ್ಲಿ ಇರುವುದು ತಿಳಿದು ಬಂದಿದೆ. ಇನ್ನು ಜ.15 ರಂದು ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಗಾಂಜಾ ಸೇವಿಸಿರುವ ಬಗ್ಗೆ ಖಾತರಿ ಪಡಿಸಲು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಜ.21 ರಂದು ಬಂದ ವೈದ್ಯಕೀಯ ವರದಿಯಲ್ಲಿ ಯುವಕ ಗಾಂಜಾ ಸೇವಿಸಿರುವುದು ದೃಢ ಪಟ್ಟಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.