ಎಸ್.ಡಿ.ಪಿ.ಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ-ಕಾಪು ಅಭ್ಯರ್ಥಿ ಘೋಷಣೆ
ಬೆಂಗಳೂರು ಜ.7 : ಎಸ್.ಡಿ.ಪಿ.ಐ ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ ಪೈಝಿ ಅವರು ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಉಡುಪಿಯ ಕಾಪುವಿನಿಂದ ಅಭ್ಯರ್ಥಿಯಾಗಿ ಹನೀಫ್ ಮುಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಿಂದ ಇಲ್ಯಾಸ್ ಮಹಮ್ಮದ್ ತುಂಬೆ, ಮೂಡಬಿದಿರೆಯಿಂದ ಅಲ್ಫೋನ್ಸೋ ಫ್ರಾಂಕೋ, ಬೆಳ್ತಂಗಡಿಯಿಂದ ಅಕ್ಬರ್ ಬೆಳ್ತಂಗಡಿ ಅವರು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಉಳಿದಂತೆ ಅಬ್ದುಲ್ ಮಜೀದ್ ಮೈಸೂರು(ನರಸಿಂಹರಾಜ), ಬಿ.ಆರ್ ಭಾಸ್ಕರ್ ಪ್ರಸಾದ್(ಪುಲಕೇಶಿ ನಗರ), ಅಬ್ದುಲ್ ಹನ್ನಾನ್ (ಸರ್ವಜ್ಞ ನಗರ, ಬೆಂಗಳೂರು), ಇಸ್ಮಾಯಿಲ್ ಝಬೀವುಲ್ಲಾ (ದಾವಣಗೆರೆ ದಕ್ಷಿಣ), ಬಾಳೆಕಾಯಿ ಶ್ರೀನಿವಾಸ್ (ಚಿತ್ರದುರ್ಗ), ನಝೀರ್ ಖಾನ್ (ವಿಜಯನಗರ) ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
100 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲು ಪಕ್ಷ ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದ ಎಂ.ಕೆ ಫೈಝಿ ಅವರು, ಶೀಘ್ರದಲ್ಲೇ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಇದೇ ವೇಳೆ ಉಳಿದ 44 ಕ್ಷೇತ್ರಗಳಾದ ರಾಯಚೂರು ನಗರ, ಚಾಮರಾಜನಗರ, ಮಂಗಳೂರು (ಉಳ್ಳಾಲ), ಪುತ್ತೂರು, ಮಡಿಕೇರಿ, ವಿರಾಜಪೇಟೆ, ಕೋಲಾರ, ಹಾವೇರಿ, ಮಂಡ್ಯ ನಗರ, ತುಮಕೂರು ನಗರ, ಶಿರಾ, ಭಟ್ಕಳ, ಶಿರಸಿ, ಶಹಾಪುರ,ಯಾದಗಿರಿ ನಗರ, ಶಿವಾಜಿನಗರ, ಹೆಬ್ಬಾಳ, ಶಾಂತಿನಗರ, ಬ್ಯಾಟರಾಯನಪುರ, ಹೊಸಕೋಟೆ, ಹುಬ್ಬಳ್ಳಿ ಪಶ್ಚಿಮ, ಚಾಮರಾಜ(ಮೈಸೂರು) ಹುಣಸೂರು, ಮುಳಬಾಗಿಲು, ರಾಮನಗರ, ಹಾಸನ, ಸಕಲೇಶಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ, ಶಿವಮೊಗ್ಗ ನಗರ, ತೇರದಾಳ(ಬಾಗಲಕೋಟೆ), ವಿಜಯಪುರ, ಮಂಗಳೂರು ಉತ್ತರ(ಸುರತ್ಕಲ್), ಚನ್ನಗಿರಿ, ಹಿರಿಯೂರು, ಭದ್ರಾವತಿ, ಬಾಗಲಕೋಟೆ ನಗರ, ದೇವದುರ್ಗ(ರಾಯಚೂರು) ಹೆಸರನ್ನು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಘೋಷಿಸಿದರು. ಈ ಮೂಲಕ SDPI ಸ್ಪರ್ಧಿಸಲಿರುವ 54 ಕ್ಷೇತ್ರಗಳ ಪಟ್ಟಿ ಅಂತಿಮ ಗೊಂಡಿದೆ.