ಉಡುಪಿ; ತಾಯಿ-ಮಗು ನಾಪತ್ತೆ
ಉಡುಪಿ(ಉಡುಪಿ ಟೈಮ್ಸ್ ವರದಿ): ತನ್ನ ಮೂರೂ ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆಯಾದ ಪ್ರಕರಣ ಉಡುಪಿಯ ನಿಟ್ಟೂರಿನಲ್ಲಿ ನಡೆದಿದೆ.
ಇಲ್ಲಿನ ಬಾಳಿಗಾ ಫಿಶ್ ನೆಟ್ ಕಂಪೌಂಡ್ ಬಳಿಯ ನಿವಾಸಿ ಲಕ್ಷ್ಮಿ (28 ) ಎಂಬ ಮಹಿಳೆಯು ತನ್ನ 3 ವರ್ಷದ ಮಗಳಾದ ಸಿಂಧೂ ಜತೆ ಜನವರಿ 18 ರಿಂದ ಕಾಣೆಯಾಗಿದ್ದೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಗೋದಿ ಬಣ್ಣ ಸಾದಾರಣ ಮೈಕಟ್ಟು ಹೊಂದಿರುವ ಮಹಿಳೆಯು 5 ಅಡಿ ಎತ್ತರವಿದ್ದು ಕೋಲು ಮುಖ ಹೊಂದಿದ್ದಾರೆ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.