ರಾಜ್ಯದಲ್ಲಿ ಮತ್ತೆ ಲಾಟರಿ ಜಾರಿಗೆ ಆಗ್ರಹ!!
ಬೆಂಗಳೂರು, ಜ.5 : ರಾಜ್ಯದಲ್ಲಿ ಸರಕಾರವು ಮತ್ತೆ ಲಾಟರಿ ಮಾರಾಟವನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣ ಅವರು, ರಾಜ್ಯದಲ್ಲಿ 2007 ರಿಂದ ಲಾಟರಿ ನಿಷೇಧಿಸಲಾಗಿದ್ದರೂ ಅಕ್ರಮ, ಆನ್ಲೈನ್ ಲಾಟರಿ ಎಗ್ಗಿಲ್ಲದೇ ನಡೆಯುತ್ತಿದೆ. ಕೇರಳ ಲಾಟರಿ ಶೇಕಡ 60ರಷ್ಟು ಅಕ್ರಮವಾಗಿ ಚಲಾವಣೆಯಲ್ಲಿದೆ ಬಜೆಟ್ ನಲ್ಲಿ ಘೋಷಣೆ ಮಾಡುವ ಮೂಲಕ ಆನ್ಲೈನ್ ಜೂಜು ಸೇರಿದಂತೆ ಅನ್ಯ ರಾಜ್ಯಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಲಾಟರಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಹಾಗೂ ರಾಜ್ಯದಲ್ಲಿ ಲಾಟರಿ ಮಾರಾಟ ಆರಂಭಿಸುವ ಬಗ್ಗೆ ಮುಂದಿನ 30 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಲಾಟರಿ ಮರು ಜಾರಿ ಬಗ್ಗೆ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.