ಬ್ರಹ್ಮಾವರ;ನೇಣು ಬಿಗಿದು 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ- ಕಾರಣ ನಿಗೂಢ
ಬ್ರಹ್ಮಾವರ(ಉಡುಪಿ ಟೈಮ್ಸ್ ವರದಿ):10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚಾಂತಾರಿನಲ್ಲಿ ನಡೆದಿದೆ.
ಬ್ರಹ್ಮಾವರದ ಲಿಟ್ಲ್ ರಾಕ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯ ಪುತ್ರಿ ಅದೇ ಶಾಲೆಯ 10 ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಶ್ರೀ(16 )ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಇಂದು ಸಂಜೆ ತಾಯಿ ಮನೆಗೆ ಬಂದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದು ತಕ್ಷಣ ಗಾಬರಿಗೊಂಡ ತಾಯಿ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೂಲಿ ಕಾರ್ಮಿಕರ ಮೂಲಕ ನೇಣು ಕುಣಿಕೆಯಿಂದ ತಪ್ಪಿಸಿ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಮಾರ್ಗದ ಮದ್ಯೆಯೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಮಣಿಪಾಲ ಆಸ್ಪತ್ರೆ ಶವಾಗಾರದಲ್ಲಿ ಮೃತ ದೇಹವಿರಿಸಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುಶ್ರೀಗೆ ಶಾಲೆಯ ಕಲಿಕಾ ಒತ್ತಡವು ಕಾರಣವಿರಬಹುದು ಎಂದೂ ಸ್ಥಳೀಯರು ಶಂಕಿಸುತ್ತಿದ್ದಾರೆ.