ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ- ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು ಜ.3 : ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ಪಾರ್ಥಿವ ಶರೀರದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಮನವಿ ಮಾಡಿಕೊಂಡಿರುವ ಅವರು, ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಹಾಗೂ ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯನ್ನೇ ಬಿಟ್ಟುಹೋಗಿದ್ದಾರೆ ಎನ್ನುವುದು ಅಲ್ಲಿನ ಜನತೆ ನಡೆದುಕೊಂಡ ರೀತಿಯನ್ನು ನೋಡಿದಾಗ ನಿಜವಾಗಿಯೂ ಸಿದ್ದೇಶ್ವರರ ಮಾತಿನಂತೆ ನಡೆದುಕೊಳ್ಳುವ ಜನ ಎಂದೆನಿಸಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!