ಆರ್.ಟಿ.ಸಿ ಬೆಲೆ ಹೆಚ್ಚಳ : ರೈತ ಸಮುದಾಯಕ್ಕೆ ಬಿಗ್ ಶಾಕ್
ಬೆಂಗಳೂರು, ಡಿ.31 (ಉಡುಪಿ ಟೈಮ್ಸ್ ವರದಿ) : 15 ರೂ. ಇದ್ದ ಪಹಣಿ(ಆರ್.ಟಿ.ಸಿ) ದರವನ್ನು ಸರಕಾರ 25 ರೂ.ಗೆ ಹೆಚ್ಚಳ ಮಾಡುವ ಮೂಲಕ ರೈತರಿಗೆ ಶಾಕ್ ನೀಡಿದೆ.
ಸರಕಾರ ಪಹಣಿ(ಆರ್.ಟಿ.ಸಿ) ಬೆಲೆಯನ್ನು 10 ರೂ. ಹೆಚ್ಚಳ ಮಾಡಿದೆ. ಸಾಲ, ಆಸ್ತಿ ಮಾರಾಟ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಹಣಿ ಅಗತ್ಯವಾಗಿದ್ದು, ರೈತರು 25 ರೂಪಾಯಿ ನೀಡಿ ಪಹಣಿ ಪಡೆದುಕೊಳ್ಳಬೇಕಿದೆ.
ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪಹಣಿ ಕಡ್ಡಾಯಗೊಳಿಸಲಾಗಿದ್ದು, ಸಬ್ಸಿಡಿಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ, ಬ್ಯಾಂಕುಗಳಲ್ಲಿ ಸಾಲ ಸೇರಿದಂತೆ ಹಲವು ಕಾರಣಕ್ಕೆ ಪಹಣಿ ಅಗತ್ಯವಾಗಿದ್ದು, ನಾಡಕಚೇರಿ, ತಹಶೀಲ್ದಾರ್ ಕಚೇರಿ, ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ರೈತರು ಪಹಣಿ ಪಡೆದುಕೊಳ್ಳಬೇಕಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಹಣಿಗೆ 5 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈಗ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಪಹಣಿ ಪಡೆಯಲು 30 ರೂಪಾಯಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ.