2021 ರ ರಸ್ತೆ ಅಪಘಾತಗಳು: ಹೆಲ್ಮೆಟ್- ಸೀಟ್ ಬೆಲ್ಟ್ ಧರಿಸದೇ ಒಟ್ಟು 62,990 ಮಂದಿ ಬಲಿ
ಹೊಸದಿಲ್ಲಿ ಡಿ.29 : ಈ ವರ್ಷದಲ್ಲಿ ದೇಶದಲ್ಲಿ ಅಪಘಾತಗಳು ಹೆಚ್ಚಾಗಿ ಹೆಚ್ಚಾಗಿದ್ದು, ಅದರಲ್ಲೂ ಸೀಟ್ ಬೆಲ್ಟ್ ಧರಿಸದೇ ಇದ್ದುದರಿಂದ 2021 ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಒಟ್ಟು 16,397 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವರದಿಯಲ್ಲಿ ಈ ಅಂಕಿ ಅಂಶ ಉಲ್ಲೇಖಿಸಲಾಗಿದ್ದು, ಅದರಂತೆ ಈ ವರದಿ ಪ್ರಕಾರ ದೇಶದಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದುದರಿಂದ ನಡೆದ ಅಪಘಾತದಲ್ಲಿ ಮೃತಪಟ್ಟ ಈ 16,397 ಮಂದಿಗಳ ಪೈಕಿ 8,438 ಮಂದಿ ಚಾಲಕರಾಗಿದ್ದು, ಉಳಿದ 7,959 ಮಂದಿ ಪ್ರಯಾಣಿಕರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹಾಗೂ 2021 ರಲ್ಲಿ ನಡೆದ ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಕಾರಣ 46,593 ಮಂದಿ ಬಲಿಯಾಗಿದ್ದರೆ ಇವರ ಪೈಕಿ 32,877 ಮಂದಿ ಚಾಲಕರಾಗಿದ್ದರೆ ಉಳಿದ 13,716 ಮಂದಿ ಹಿಂಬದಿ ಪ್ರಯಾಣಿಕರಾಗಿದ್ದರು. ಹೆಲ್ಮೆಟ್ ಧರಿಸದೇ ಇದ್ದುದರಿಂದ 2021ರಲ್ಲಿ ಅಪಘಾತ ನಡೆದ ವೇಳೆ 93,763 ಮಂದಿ ಗಾಯಗೊಂಡಿದ್ದರೆ, ಸೀಟ್ ಬೆಲ್ಟ್ ಧರಿಸದೇ ಇದ್ದುದರಿಂದ ಅಪಘಾತಗಳಲ್ಲಿ 39,231 ಮಂದಿ ಗಾಯಗೊಂಡಿದ್ದರು
ಇನ್ನು 2021 ರಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ಸಂಭವಿಸಿವೆ ಹಾಗೂ ಈ ಅಪಘಾತಗಳಲ್ಲಿ 1,53,972 ಮಂದಿ ಬಲಿಯಾಗಿದ್ದು, 3,84,448 ಮಂದಿ ಗಾಯಗೊಂಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.