ರೈಲ್ವೇ ಬಳಕೆದಾರರ ದತ್ತಾಂಶ ಸೋರಿಕೆ ಆರೋಪ: ಸುದ್ದಿಯಲ್ಲಿ ನೈಜತೆ ಇಲ್ಲ ಎಂದ ರೈಲ್ವೇ ಸಚಿವಾಲಯ
ನವದೆಹಲಿ, ಡಿ.29 : `ರೈಲ್ವೇ ಬಳಕೆದಾರರ ದತ್ತಾಂಶ ಸೋರಿಕೆಯಾಗಿಲ್ಲ’ ಎಂದು ರೈಲ್ವೇ ಸಚಿವಾಲಯ ಸ್ಪಷ್ಟನೆ ನೀಡಿದೆ
ಹ್ಯಾಕರ್ಗಳ ವೇದಿಕೆಯೊಂದು 3 ಕೋಟಿಗೂ ಅಧಿಕ ಭಾರತೀಯ ರೈಲ್ವೇ ಬಳಕೆದಾರರ ದತ್ತಾಂಶವನ್ನು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕಿಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ರೈಲ್ವೇ ಸಚಿವಾಲಯವು, ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಸೇರಿದಂತೆ ರೈಲ್ವೆ ಇಲಾಖೆಯ ಯಾವ ಸರ್ವರ್ನಿಂದಲೂ ದತ್ತಾಂಶ ಸೋರಿಕೆಯಾಗಿಲ್ಲ. ದತ್ತಾಂಶವನ್ನು ಕಳವು ಮಾಡಿ ಸೋರಿಕೆ ಮಾಡಲಾಗಿದೆ ಎಂಬ ಸುದ್ದಿಯಲ್ಲಿ ನೈಜತೆ ಇಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಸುಳ್ಳು ಮಾಹಿತಿ ಹರಡಿರುವವರ ವಿರುದ್ದ ಐಆರ್ಸಿಟಿಸಿ ತನಿಖೆ ನಡೆಸಲಿದೆ ಎಂದೂ ತಿಳಿಸಿದೆ.
ಏಲಿಯಸ್ ಶ್ಯಾಡೊಹ್ಯಾಕರ್ಸ್ ಎಂಬ ಹ್ಯಾಕರ್ಸ್ ಗಳ ವೇದಿಕೆಯೊಂದು ನಮ್ಮ ಬಳಿ ಮೂರು ಕೋಟಿಗೂ ಅಧಿಕ ಮಂದಿ ರೈಲ್ವೇ ಬಳಕೆದಾರರ ದತ್ತಾಂಶವಿದ್ದು, ಡಾರ್ಕ್ವೆಬ್ನಲ್ಲಿ ಅದನ್ನು ಮಾರಾಟಕ್ಕಿಟ್ಟಿದ್ದೇವೆ. ಹೆಸರು, ಇಮೇಲ್ ವಿಳಾಸ, ಮೊಬೈಲ್ ನಂಬರ್, ವಾಸಸ್ಥಾನಗಳೂ ಇದರಲ್ಲಿ ಸೇರಿವೆ ಎಂದು ಹೇಳಿತ್ತು.