ಉಡುಪಿ: ಜ.6-ಮಕ್ಕಳ ರಕ್ಷಣಾ ಆಯೋಗದ ಸಭೆ-ದೂರುಗಳ ಸ್ವೀಕಾರ

ಉಡುಪಿ ಡಿ.27 (ಉಡುಪಿ ಟೈಮ್ಸ್ ವರದಿ) : ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ವತಿಯಿಂದ ಕುಂದು ಕೊರತೆ ನಿವಾರಣೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದೂರುಗಳ ಅಹವಾಲು ಸ್ವೀಕಾರ ಸಭೆಯು ಜ.6 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಜಿಲ್ಲಾ ಪಂಚಾಯತ್ ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಮಕ್ಕಳನ್ನು ಅಪಾಯಕಾರಿ ಉದ್ಯೋಗದಲ್ಲಿ ಗೃಹ ಕಾರ್ಮಿಕರಂತೆ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳುವುದು, ರಕ್ಷಿಸಲ್ಪಟ್ಟ ಬಾಲಕಾರ್ಮಿಕರನ್ನು ಸ್ವದೇಶಕ್ಕೆ ಕಳುಹಿಸುವುದು, ಬಾಕಿ/ಪರಿಹಾರವನ್ನು ಪಾವತಿಸದಿರುವುದು, ಆಸಿಡ್ ದಾಳಿ ಸಂಬಂಧಿಸಿದ ವಿಷಯಗಳು, ಬಲವಂತದ ಭಿಕ್ಷೆ, ಪೋಷಕರು/ಯಾವುದೇ ವ್ಯಕ್ತಿಯೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುವುದು, ಕೌಟುಂಬಿಕ ಹಿಂಸೆಗೆ ಬಲಿಯಾದ ಮಗು, ಅಕ್ರಮ ದತ್ತು, ಸಿಸಿಐಯಲ್ಲಿ ಮಗುವಿನ ದುರ್ಬಳಕೆ/ಅಸಭ್ಯ ವರ್ತನೆ, ಸಿಸಿಐ ಮೂಲಕ ಮಗುವಿನ ಮಾರಟ, ಮಕ್ಕಳ ಮೇಲಿನ ದೌರ್ಜನ್ಯ, ಮಗುವಿನ ಮಾರಾಟ, ಅಪಹರಣ, ಕಾಣೆಯಾದ ಮಗು, ಶಾಲೆಯಲ್ಲಿ ದೈಹಿಕ ಹಿಂಸೆ, ಲೈಂಗಿಕ ದೌರ್ಜನ್ಯ-ಪರಿಹಾರ, ಮಾದಕ ವಸ್ತುಗಳ ದುರ್ಬಳಕೆ ಮುಂತಾದ ವಿಷಯಗಳ ಕುರಿತು ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.