ಅವಧಿ ಪೂರ್ವ ಚುನಾವಣೆ ಇಲ್ಲ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಡಿ.24: ಅವಧಿ ಪೂರ್ವ ಚುನಾವಣೆ ಮಾಡುವ ಯೋಚನೆಯನ್ನು ನಮ್ಮ ಸರ್ಕಾರ ಅಥವಾ ಪಕ್ಷ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಿ, ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಬಹುಶಃ ಕಾಂಗ್ರೆಸ್ ಗೆ ಸಮಯ ಕೊಟ್ಟಷ್ಟು ಅವರ ಒಳಜಗಳ ಹೆಚ್ಚಾಗುತ್ತದೆ ಎಂದು ಅಭದ್ರತೆ ಕಾಡುತ್ತಿದೆ ಎಂದರು.