ಶಾಲಾ ಬಸ್-ಗೂಡ್ಸ್ ರಿಕ್ಷಾ ಡಿಕ್ಕಿ: ಓರ್ವ ಮೃತ್ಯು-ಇಬ್ಬರು ಗಂಭೀರ
ಬೆಳ್ತಂಗಡಿ ಡಿ.24 : ಕೊಯ್ಯೂರು ಗ್ರಾಮದ ಮಲೆಬೆಟ್ಟು ಎಂಬಲ್ಲಿ ಶಾಲಾ ಬಸ್ಸು ಮತ್ತು ಗೂಡ್ಸ್ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ರಿಕ್ಷಾದಲ್ಲಿದ್ದ ರಝಾಕ್ (50) ಮೃತಪಟ್ಟವರು. ಚಾಲಕ ಹನೀಫ್(48), ಪಣಕಜೆ ನಿವಾಸಿ ಕೆ.ಮೊಹಮ್ಮದ್ (57) ಗಂಭೀರ ಗಾಯಗೊಂಡವರು.
ಶಾಲಾ ಬಸ್ ಬೆಳ್ತಂಗಡಿಯಿಂದ ಕೊಯ್ಯರು ಕಡೆಗೆ ಹೋಗುತಿದ್ದಾಗ ಗೂಡ್ಸ್ ರಿಕ್ಷಾಕ್ಕೆ ಮಲೆಬೆಟ್ಟು ದೇವಸ್ಥಾನದ ಬಳಿ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ರಿಕ್ಷಾದಲ್ಲಿದ್ದ ರಝಾಕ್ ಸಾವನ್ನಪ್ಪಿದ್ದು ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಚಾಲಕ ಹನೀಫ್, ಪಣಕಜೆ ನಿವಾಸಿ ಕೆ.ಮೊಹಮ್ಮದ್ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.