ತುಳುಕೂಟದಿಂದ ಸಹಕಾರಿ ರತ್ನ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನೆ
ಉಡುಪಿ ಡಿ.23 (ಉಡುಪಿ ಟೈಮ್ಸ್ ವರದಿ): ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹಾಗೂ ಉಡುಪಿ ತುಳುಕೂಟದಂತಹ ಸಂಘಟನೆಗಳು ಬೆನ್ನೆಲುಬಾಗಿ ನಿಂತಿದ್ದರಿಂದ ಸಹಕಾರಿ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಲು ನನಗೆ ಸಾಧ್ಯವಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ, ಸಹಕಾರಿ ರತ್ನ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅವರು ಹೇಳಿದ್ದಾರೆ.
ಉಡುಪಿ ತುಳುಕೂಟದ ವತಿಯಿಂದ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತುಳುಕೂಟದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ರತ್ನ ಗೌರವದ ಸ್ಥಾನಮಾನ ದೊರಕಿರುವುದರಿಂದ ಸಹಕಾರಿ ರಂಗದಲ್ಲಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದರು.
ಈ ವೇಳೆ ಉಡುಪಿ ತುಳುಕೂಟದ ಗೌರವ ಸಲಹೆಗಾರ ಡಾ.ಗಣನಾಥ ಎಕ್ಕಾರ್ ಅವರು ಅಭಿನಂದನಾ ಭಾಷಣ ಮಾಡಿ, ಸಹಕಾರಿ ರಂಗ, ಸಾಮಾಜಿಕ, ಧಾರ್ಮಿಕ ರಂಗ, ಸಾಂಸ್ಕೃತಿಕ ರಂಗದಲ್ಲಿ ಅವಿರತವಾಗಿ ಸೇವೆ ಮಾಡುತ್ತಿರುವ ಇಂದ್ರಾಳಿ ಜಯಕರ್ ಶೆಟ್ಟಿ ಅವರು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ತುಳುಕೂಟದ ಗೌರವ ಉಪಾಧ್ಯಕ್ಷ ದಿವಾಕರ್ ಸನಿಲ್, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ, ಕೋಶಾಧಿಕಾರಿ ಚೈತನ್ಯ ಎಂ.ಜಿ., ಗೌರವ ಸಲಹೆಗಾರ ವಿಶ್ವನಾಥ ಶೆಣೈ ಉಡುಪಿ, ಉಡುಪಿ ತುಳುಕೂಟದ ಪದಾಧಿಕಾರಿಗಳಾದ ಮನೋರಮ ಎಂ.ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಬಿ.ಪ್ರಭಾಕರ್ ಭಂಡಾರಿ, ದಯಾನಂದ ಕೆ.ಶೆಟ್ಟಿ ದೆಂದೂರು, ಎಸ್.ಎ.ಕೃಷ್ಣಯ್ಯ, ಜಯಕರ್ ಶೆಟ್ಟಿ ಅವರ ಸಹೋದರರು ಉಪಸ್ಥಿತರಿದ್ದರು.