ಬ್ರಹ್ಮಾವರ: ಅಕ್ರಮ ಕಸಾಯಿಖಾನೆಗೆ ಶಂಕರನಾರಾಯಣ ಪೊಲೀಸರಿಂದ ದಾಳಿ
ಬ್ರಹ್ಮಾವರ ಡಿ.23 (ಉಡುಪಿ ಟೈಮ್ಸ್ ವರದಿ) : ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ನಿನ್ನೆ ಸಂಜೆ ವೇಳೆ ಶಂಕರನಾರಾಯಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಬೆಗ್ಗೆ ಖಚಿತ ಮಾಹಿತಿ ಪಡೆದ ಶಂಕರನಾರಾಯಣ ಠಾಣಾ ಪೊಲೀಸರು, ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿರುವ ಇಮ್ತಿಯಾಜ್ ಎಂಬುವರಿಗೆ ಸೇರಿದ ವಾಸ್ತವ್ಯದ ಮನೆಯ ಬದಿಯ ಶೆಡ್‍ಗೆ ದಾಳಿ ಮಾಡಿದ್ದರು.
ಈ ವೇಳೆ ಶೆಡ್‍ನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಸಾಯಿಖಾನೆ ಮಾಡಿ ಹೈಕಾಡಿ ನೀರಿನ ಟ್ಯಾಂಕ್ ಬಳಿ ಮೇಯಲು ಬಿಟ್ಟಿದ ಕರುವನ್ನು ಕಳವು ಮಾಡಿಕೊಂಡು ಬಂದು ಹತ್ಯೆ ಮಾಡಿ ಮಾಂಸ ಮಾಡಿದ್ದು ಕಂಡುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.