ಕೋಟ್ಯಾಂತರ ರೂ. ವಂಚನೆ: ಕಮಲಾಕ್ಷಿ ವಿ. ಸಹಕಾರ ಸಂಘದ ಅಧ್ಯಕ್ಷನ ವಿರುದ್ಧ ದೂರು ದಾಖಲು

ಉಡುಪಿ ಡಿ.22 (ಉಡುಪಿ ಟೈಮ್ಸ್ ವರದಿ): ಕೋಟ್ಯಾಂಟರ ರೂ. ವಂಚನೆ ಆರೋಪ ಎದುರಿಸುತ್ತಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ಭಟ್ ವಿರುದ್ಧ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳದ ಪ್ರಕಾಶ್ ಕಾಮತ್ ಎಂಬವರು ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 2019 ರಲ್ಲಿ ಎಫ್.ಡಿ ಯನ್ನು ಇಟ್ಟಿದ್ದು, ಈ ಹಣಕ್ಕೆ ಸಹಕಾರ ಸಂಘ ಪ್ರತಿ ತಿಂಗಳು ಶೇ.10 ರಂತೆ ಬಡ್ಡಿಯನ್ನು ಪ್ರಕಾಶ್ ಕಾಮತ್ ಅವರ ಎಸ್.ಬಿ ಖಾತೆಗೆ ಹಾಕುತ್ತಿತ್ತು. ಹಾಗೂ 3 ವರ್ಷದ ನಂತರ ರಿನಿವಲ್ ಕೂಡಾ ಮಾಡಿತ್ತು. ಆದರೆ ಜೂನ್ 2022 ರಿಂದ ಪ್ರಕಾಶ್ ಕಾಮತ್ ಅವರ ಖಾತೆಗೆ ಬಡ್ಡಿ ಹಣವನ್ನು ಹಾಕಿರುವುದಿಲ್ಲ ಹಾಗೂ ಈ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನದಲ್ಲೆ ಬಡ್ಡಿಯನ್ನು ನೀಡುವುದಾಗಿ ಹೇಳಿದ್ದರು. ಆದರೆ ಈ ತನಕ ನೀಡಿರುವುದಿಲ್ಲ ಎಂದು ಪ್ರಕಾಶ್ ಕಾಮತ್ ಅವರು ಆರೋಪಿಸಿದ್ದಾರೆ.

This image has an empty alt attribute; its file name is sanga5.jpg

ಹಾಗೂ ಇತ್ತೀಚೆಗೆ ಡಿ.20ರಂದು ಪತ್ರಿಕೆಯಲ್ಲಿ ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಕೋಟ್ಯಂತರ ರೂಪಾಯಿ ವಂಚನೆ ಆರೋಪ, ಪ್ರತಿಭಟನೆ ಬಗ್ಗೆ ಸುದ್ದಿ ನೋಡಿ ಪ್ರಕಾಶ್ ಕಾಮತ್ ಅವರು ಅದೇ ದಿನ ಸಂಘದ ಕಚೇರಿಗೆ ಬಂದು ನೋಡಿದಾಗ ಕಚೇರಿ ಮುಚ್ಚಿರುವುದು ಗಮನಕ್ಕೆ ಬಂದಿದೆ. ಈ ಸಹಕಾರ ಸಂಘವು ಪ್ರಕಾಶ್ ಕಾಮತ್ ಅವರಂತೆ ಕೆ ಸತ್ಯಮೂರ್ತಿ ರಾವ್, ಲೀಲಾವತಿ, ಡಿ ಭಾಸ್ಕರ್ ಕೋಟ್ಯಾನ್, ಟಿ ಕೃಷ್ಣ ಗಾಣಿಗ, ಸುರೇಶ್ ಭಟ್ ಅವರಿಂದ ಒಟ್ಟು 40,59,000 ರೂಪಾಯಿ ಹೂಡಿಕೆ ಮಾಡಿಸಿಕೊಂಡಿದೆ. ಮಾತ್ರವಲ್ಲದೆ ಇತರ ನೂರಾರು ಜನರಿಂದ ಕೂಡಾ ಹೂಡಿಕೆ ಮಾಡಿಕೊಂಡು ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ಭಟ್, ಮ್ಯಾನೇಜರ್ ಆಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಡ್ಡಿಯನ್ನು ಸರಿಯಾಗಿ ನೀಡದೆ ಸಹಕಾರ ಸಂಘವನ್ನು ಮುಚ್ಚಿಕೊಂಡು ಹೋಗಿ ವಂಚಿಸಿದ್ದಾರೆ ಎಂಬುದಾಗಿ ಪ್ರಕಾಶ್ ಕಾಮತ್ ಅವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!