ಶಂಕರ ನಾರಾಯಣ: ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
ಶಂಕರ ನಾರಾಯಣ: ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಬಾಳ್ಕಟ್ಟು ಹೊಳೆ ಎಂಬಲ್ಲಿ ನಡೆದಿದೆ.
ಸುರೇಂದ್ರ ಪೂಜಾರಿ (43) ಸಾವಿಗೀಡಾದವರು ಇವರು ಜ. 10 ರಂದು ಸ್ನಾನಕ್ಕೆಂದು ಹೊಳೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.