ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ: ಸಿ.ಟಿ ರವಿ
ಬೆಳಗಾವಿ, ಡಿ.21 : ಭಾರತದ ಪರವಾಗಿ `ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಬೊಗಳಿಲ್ಲ, ಬದಲಾಗಿ ಚೀನಾ, ಪಾಕಿಸ್ತಾನದ ಪರ ಬೊಗಳುತ್ತೆ’ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಅವರು, `ಮಹಾತ್ಮಾ ಗಾಂಧೀಜಿಯ ಕಾಂಗ್ರೆಸ್ ಅಲ್ಲ ಇದು, ಈಗ ಇರೋದು ಇಟಲಿ ಕಾಂಗ್ರೆಸ್’ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೂ “ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಆದರೆ ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿ ಇಂದಿರಾ ಗಾಂಧಿಯನ್ನು ಕೆಳಗೆ ಇಳಿಸಿದರು. ಖರ್ಗೆಯವರು ಅಂದಿನ ದಿನಮಾನ ನೆನಪಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದ್ದಾರೆ.