ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತೋತ್ಸವ: ಸಮಿತಿ ಸಂಚಾಲಕರಾಗಿ ಶರೀಫ್ ಕಾರ್ಕಳ, ಪ್ರ. ಕಾರ್ಯದರ್ಶಿ ಜಯಕರ ಸುವರ್ಣ
ಉಡುಪಿ ಡಿ.21(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 25 ವರ್ಷವನ್ನು ಪೂರ್ಣಗೊಳಿಸಿದ್ದು ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮದ ಕ್ಷಣವನ್ನು ಅರ್ಥಪೂರ್ಣವಾಗಿ ಆಚರಿಸಲು ಇಡೀ ವರ್ಷ 25 ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಈ 25 ಕಾರ್ಯಕ್ರಮದ ಯಶಸ್ವಿಗಾಗಿ ರಜತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಹಿರಿಯ ವರದಿಗಾರ ಮುಹಮ್ಮದ್ ಶರೀಫ್ ಕಾರ್ಕಳ ಅವರನ್ನು ಸಮಿತಿ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಸಮಿತಿಯ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಅಲೆವೂರು, ಉಪಾಧ್ಯಕ್ಷರಾಗಿ ಗಣೇಶ್ ನಾಯಕ್, ಅಂದುಕಾ, ಸುರೇಶ್ ಎರ್ಮಾಳ್, ಶಶಿಧರ್ ಹೆಮ್ಮಾಡಿ, ರಾಜೇಶ್ ಅಚ್ಲಾಡಿ, ಅಜಿತ್ ಆರಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಕರ ಸುವರ್ಣ, ಜತೆ ಕಾರ್ಯದರ್ಶಿಯಾಗಿ ದೀಪಕ್ ಜೈನ್, ಕೋಶಾಧಿಕಾರಿಯಾಗಿ ಉಮೇಶ್ ಮಾರ್ಪಳ್ಳಿ ಹಾಗೂ ಗೌರವ ಸಲಹೆಗಾರರಾಗಿ ಗೋಕುಲ್‍ದಾಸ್ ಪೈ, ದಿನೇಶ್ ಕಿಣಿ, ಕಿರಣ್ ಮಂಜನಬೈಲು, ಗಣೇಶ್‍ಪ್ರಸಾದ್ ಪಾಂಡೇಲು, ಎನ್. ಗುರುರಾಜ್, ಎ.ಎಸ್.ಎನ್. ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಇವರ ಜೊತೆಗೆ ಆರ್ಥಿಕ ಸಮಿತಿ ಸದಸ್ಯರಾಗಿ ಕೆ.ಸಿ.ರಾಜೇಶ್, ಆರ್.ಬಿ.ಜಗದೀಶ್, ರಾಕೇಶ್ ಕುಂಜೂರು, ಹರೀಶ್ ಹೆಜಮಾಡಿ, ನಾಗರಾಜ ರಾಯಪ್ಪನಮಠ, ಹೆಬ್ರಿ ಉದಯ ಶೆಟ್ಟಿ, ಅರುಣ್ ಕುಮಾರ್ ಶೀರೂರು, ಮೋಹನ್ ಉಡುಪ, ಜನಾರ್ದನ ಕೊಡವೂರು, ಗಣೇಶ್ ಸಾಯ್ಬರಕಟ್ಟೆ, ಗಣೇಶ್ ಕಲ್ಯಾಣಪುರ ಅವರನ್ನು ಸಾಂಸ್ಕೃತಿಕ ಸಮಿತಿ ಸದಸ್ಯರಾಗಿ ಶಶಿಧರ ಮಾಸ್ತಿಬೈಲು, ಆಸ್ಟ್ರೋ ಮೋಹನ್, ಅನೀಲ್ ಕೈರಂಗಳ, ರಶ್ಮಿ ಅಮ್ಮೆಂಬಳ, ಹರಿಪ್ರಸಾದ್ ನಂದಳಿಕೆ, ಉದಯ ಪಡಿಯಾರ್, ಲೋಕೇಶ್ ತೆಕ್ಕಟ್ಟೆ, ಪುಂಡಾಲಿಕ ಮರಾಠೆ, ರವೀಂದ್ರ ಕೋಟ, ನಾಗರಾಜ್ ರಾವ್ ವರ್ಕಾಡಿ, ಪ್ರವೀಣ್ ಮುದ್ದೂರು, ಜಾನ್ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ.
ಇವರೊಂದಿಗೆ ಕ್ರೀಡಾ ಸಮಿತಿ ಸದಸ್ಯರಾಗಿ ರಾಜು ಖಾರ್ವಿ, ಚೇತನ್ ಮಟಪಾಡಿ, ಪ್ರಶಾಂತ್ ಪಾದೆ, ಉದಯ ಮುಂಡ್ಕೂರು, ರಾಘವೇಂದ್ರ ಭಟ್, ಕೃಷ್ಣ ಬಿಜೂರು, ಹಮೀದ್ ಪಡುಬಿದ್ರಿ, ಚಂದ್ರಶೇಖರ್ ಬಿಜಾಡಿ, ದಿನೇಶ್ ಕಾಶಿಪಟ್ಣ, ಅಶ್ವಥ್ ಆಚಾರ್ಯ, ಸ್ಮರಣ ಸಂಚಿಕೆ-ಪುಸ್ತಕ ಸಮಿತಿ ಸದಸ್ಯರಾಗಿ ಯು.ಎಸ್.ಶೆಣೈ, ಸುಜಿ ಕುರ್ಯ, ಬಾಲಚಂದ್ರ, ಬಿ.ಬಿ.ಶೆಟ್ಟಿಗಾರ್, ಸುಭಾಷ್ ಚಂದ್ರ ವಾಗ್ಳೆ, ಶೀಜಾ, ಶೇಷಗಿರಿ ಭಟ್, ರಾಧಿಕಾ. ಕಾರ್ಯಕ್ರಮ ಆಯೋಜನ ಸಮಿತಿ ಸದಸ್ಯರಾಗಿ ನಝೀರ್ ಪೊಲ್ಯ, ಪ್ರಮೋದ್ ಸುವರ್ಣ, ಕೆ.ಎಂ.ಖಲೀಲ್, ಪರೀಕ್ಷಿತ್ ಶೇಟ್, ರಾಮ ಅಜೆಕಾರು, ರಕ್ಷಿತ್ ಬೆಳಪು, ನಿತೀಶ್, ಲಕ್ಷ್ಮೀ ಮಚ್ಚಿನ, ಅವಿನ್ ಶೆಟ್ಟಿ, ಜೀವನ್ ಆರ್.ಶೆಟ್ಟಿ. ಹರೀಶ್ ಪಾಲೆಚ್ಚಾರ್ ಮತ್ತು ಪ್ರಚಾರ ಸಮಿತಿ ಸದಸ್ಯರಾಗಿ ರಹೀಂ ಉಜಿರೆ, ಮೈಕಲ್ ರೋಡ್ರಿಗಸ್, ಕೃಷ್ಣ ಅಜೆಕಾರು, ಸೂರಜ್, ಅಂಕಿತ್ ಶೆಟ್ಟಿ, ಜಯಂತ್, ಹರೀಶ್ ಕುಂದರ್, ಹರೀಶ್ ತುಂಗ, ಹರೀಶ್ ಸಚ್ಚರಿಪೇಟೆ, ಜಸ್ಟಿನ್, ಶ್ರೀಕಾಂತ್ ಹೆಮ್ಮಾಡಿ, ಸಂದೀಪ್ ಪೂಜಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇನ್ನು ರಜತ ಮಹೋತ್ಸವದ ಅಂಗವಾಗಿ ಜನವರಿ ತಿಂಗಳಿನಿಂದ ಡಿಸೆಂಬರ್ ವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಪತ್ರಿಕಾ ರಂಗಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರಗಳು, ವಿವಿಧ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿಯುತ್ತಿರುವ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಳ್ಳಲಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತುರ್ತು ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮ ಪತ್ರಿಕಾ ಸಮ್ಮೇಳನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಜೊತೆ ಸಂವಾದ ಕಾರ್ಯಕ್ರಮ ಜನಪ್ರತಿನಿಧಿಗಳ ಜೊತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚಾಕೂಟಗಳು ನಡೆಯಲಿದೆ. ಮಾತ್ರವಲ್ಲದೆ ಶೈಕ್ಷಣಿಕ ಸಂಸ್ಥೆಗಳ ಸಹಯೋಗದ ಜೊತೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸವ ಕಾರ್ಯಾಗಾರ, ಛಾಯಾಚಿತ್ರ ಮತ್ತು ವೀಡಿಯೋ ತರಬೇತಿ ಆಯೋಜಿಸುವ ಉದ್ದೇಶವಿದ್ದು, ಪತ್ರಿಕಾ ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.