ಉಡುಪಿ: ಮಕರ ಸಂಕ್ರಾಂತಿಯಂದು “ಶ್ರೀಗೆಜ್ಜೆಗಿರಿ ಕ್ಷೇತ್ರ ಮಹತ್ಮೆ” ಯಕ್ಷಗಾನ
ಉಡುಪಿ ಡಿ.21(ಉಡುಪಿ ಟೈಮ್ಸ್ ವರದಿ) : ಮಕರ ಸಂಕ್ರಾಂತಿ ದಿನದ ವಿಶೇಷವಾಗಿ ಉಡುಪಿಯ ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ಜ.14 ರಂದು ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಯಕ್ಷಗಾನ ಕಲಾ ಮಂಡಳಿ, ಗೆಜ್ಜೆಗಿರಿ ಮೇಳದವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹತ್ಮೆ ಯಕ್ಷಗಾನ ಕಾರ್ಯಕ್ರಮ ಕಿನ್ನಿಮುಲ್ಕಿಯ ಒಡ್ಡಾಡಿ ಮೈದಾನದಲ್ಲಿ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿರುವ ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವ ಅಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ಅವರು, ಜ.14 ರಂದು ಸಂಜೆ 7 ಗಂಟೆಗೆ ಕಿನ್ನಿಮುಲ್ಕಿಯ ಒಡ್ಡಾಡಿ ಮೈದಾನದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ, ಜಾನಪದ ಕಲಾವಿದ ಬನ್ನಂಜೆ ಬಾಬು ಅಮೀನ್ ರವರನ್ನ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗೂ ನಾದ ಸ್ವರ , ಬ್ಯಾಂಡ್ , ಚಂಡೆ, ಸುಡುಮದ್ದು ಮುಂತಾದ ವಿಶೇಷ ಪ್ರದರ್ಶನದ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನ ಚಿತ್ರನಟರು ಕೂಡ ಭಾಗವಹಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ ಪದ್ಮರಾಜ್ , ಉಡುಪಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ , ಬಿಲ್ಲವ ಮಹಾಜನ ಸಂಘದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್, ವಕೀಲರಾದ ಪ್ರಸನ್ನ ಶೆಟ್ಟಿ ಬೈಂದೂರು ನಾರಾಯಣ ಗುರು ಕೊ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ಮುಂತಾದವರು ಭಾಗ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.