ಮಣಿಪಾಲ: ಗಾಂಜಾ ಸೇವನೆ – ಮೂವರು ಪೊಲೀಸ್ ವಶಕ್ಕೆ
ಮಣಿಪಾಲ ಡಿ.21 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಪರಿಸರದಲ್ಲಿ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬಿನಂದ್ .ಎ.ಎಸ್ , ಸಿದ್ದಾರ್ಥ. ವಿ., ಸಾರ್ಥಕ್ ಸಿಂಗ್ ಪೊಲೀಸರು ವಶಕ್ಕೆ ಪಡೆದವರು.
ಮಣಿಪಾಲ ಠಾಣಾ ಪೊಲೀಸರು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಪರಿಸರದಲ್ಲಿ ಅಬಿನಂದ್, ಸಿದ್ದಾರ್ಥ. ವಿ., ಸಾರ್ಥಕ್ ಸಿಂಗ್ ಎಂಬ ಮೂವರನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.