2 ನೇ ಬಾರಿ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಆಯ್ಕೆ

ಬೆಳಗಾವಿ, ಡಿ.21: ಬಿಜೆಪಿ ಅಭ್ಯರ್ಥಿ ಹಾಗೂ ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಸವರಾಜ್ ಹೊರಟ್ಟಿ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿರುವ ಹಿನ್ನಲೆ ಬುಧವಾರ ಪರಿಷತ್ ನಲ್ಲಿ ಬಸವರಾಜ್ ಹೊರಟ್ಟಿ ಅವರ ಹೆಸರನ್ನು ಪರಿಷತ್ ಸದಸ್ಯರು ಪ್ರಸ್ತಾಪಿಸಿದರು. ಬಳಿಕ ಅನುಮೋದನೆಯ ಮೂಲಕ ಘೋಷಣೆ ಮಾಡಲಾಯಿತು. ಸದ್ಯ 2 ನೇ ಬಾರಿಗೆ ಸಭಾಪತಿ ಸ್ಥಾನವನ್ನು ಅಲಂಕರಿಸಿರುವ ಅವರನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕರು ಸಭಾಪತಿ ಪೀಠಕ್ಕೆ ಕರೆತಂದರು.

Leave a Reply

Your email address will not be published. Required fields are marked *

error: Content is protected !!