ತಂಬಾಕು ಮಾರಾಟ- ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ ಮೇಲೆ ದಾಳಿ

ಉಡುಪಿ, ಡಿ.20 : ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಪುತ್ತಿಗೆ ಹಾಗೂ ಪೆರ್ಡೂರು ವ್ಯಾಪ್ತಿಯ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಲಾಯಿತು.

ಈ ವೇಳೆ ಅಂಗಡಿ ಮಾಲೀಕರಿಂದ 43,000 ರೂ. ದಂಡ ವಸೂಲಿ ಮಾಡಿ ಸೆಕ್ಷನ್ 4, 6(ಎ) ಮತ್ತು 6 (ಬಿ) ಅಡಿಯಲ್ಲಿ 29 ಪ್ರಕರಣ ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ತಾಲೂಕು ಶಿಕ್ಷಣ ಇಲಾಖೆಯ ಗೋಪಾಲ ಶೆಟ್ಟಿ, ಕಾರ್ಮಿಕ ನಿರೀಕ್ಷಕ ವಿಜಯೇಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿಕಚೇರಿಯ ಶೈಲಾ ಶ್ಯಾಮನೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

1 thought on “ತಂಬಾಕು ಮಾರಾಟ- ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ ಮೇಲೆ ದಾಳಿ

  1. ತಂಬಾಕು ಮಾರಾಟ ಮಾಡಬಾರದು ಎಂದು ಇದ್ದಲ್ಲಿ ಅದನ್ನು ತಯಾರಿಸುವ ಕೇಂದ್ರ ಗಳನ್ನು ನಿಲ್ಲಿಸಿ ಅದನು ತಯಾರಿಸುವ ಕಾರ್ಖಾನೆ ನಿಲ್ಲಿಸಿ ಅದು ಬಿಟ್ಟು ಮಾರಾಟ ಮಾಡುವ ಅಂಗಡಿ ಮುಂಗಟ್ಟುgalige ದಂಡ ವಿಧಿಸಿದ ಈ ಕಾನೂನು ಯಾಕೋ ಸರಿ ಕಾಣಲಿಲ್ಲ.

Leave a Reply

Your email address will not be published. Required fields are marked *

error: Content is protected !!