ಡಿ.23-ಐಸಿಎಐ ಉಡುಪಿ ಶಾಖಾ ವಾರ್ಷಿಕ ಸಮ್ಮೇಳನ: ಜ್ಞಾನ ಸಮ್ಮಿಲನ-2022

ಉಡುಪಿ ಡಿ.20(ಉಡುಪಿ ಟೈಮ್ಸ್ ವರದಿ): ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ಇದರ ವಾರ್ಷಿಕ ಸಮ್ಮೇಳನ -ಜ್ಞಾನ ಸಮ್ಮಿಲನ 2-22 ಡಿ.23 ರಂದು ಕಾಪು ಸಮೀಪದ ಪಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆ ಉಡುಪಿ ಶಾಖೆಯ ಅಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ನಾಲ್ಕು ವಿಷಯಾಧಾರಿತ ಗೋಷ್ಠಿಯನ್ನು ಆಯೋಜಿಸಲಾಗಿದೆ. ಖ್ಯಾತ ಬರಹಗಾರ ಸಿಎ ಪಟ್ಟಭಿರಾಮನ್, ಕೇಂದ್ರೀಯ ಮಂಡಳಿಯ ಸದಸ್ಯ ಸಿಎ ಕೋತ ಶ್ರೀನಿವಾಸ್, ಪ್ರಾದೇಶಿಕ ಮಂಡಳಿಯ ಸದಸ್ಯೆ ಸಿಎ ಗೀತಾ ಎ.ಬಿ, ಕರ್ನಾಟಕ ರಾಜ್ಯ ಪರಿಶೋಧಕರ ಸಂಸ್ಥೆಯ ಅಧ್ಯಕ್ಷ ಸಿಎ ಪ್ರಮೋದ್ ಶ್ರೀಹರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಾಗೂ ಈ ಕಾರ್ಯಕ್ರದ ಪ್ರಯುಕ್ತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಿ.24ರಂದು ಸಂಸ್ಥೆಯ ಸದಸ್ಯರು, ಅವರ ಕೌಟುಂಬದ ಸದಸ್ಯರು ಮತ್ತು ಅತಿಥಿಗಳಿಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಶಾಖಾ ಉಪಾಧ್ಯಕ್ಷ ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್, ಕಾರ್ಯದರ್ಶಿ ಸಿಎ ಮಹಿಂದ್ರಾ ಶೆಣೈ, ಖಜಾಂಚಿ ಸಿಎ ಅರ್ಚನಾ ಮಯ್ಯ, ಸಿಕಾಸಾ ಅಧ್ಯಕ್ಷ ಸಿಎ ಮಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!