ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಕಪ್’ ತ್ರೋಬಾಲ್ ಚಾಂಪಿಯನ್ಶಿಪ್- ಉಡುಪಿಯ ವೈಷ್ಣವಿ ಜಿ.ಸುವರ್ಣಗೆ ಪ್ರಥಮ ಸ್ಥಾನ
ಉಡುಪಿ ಡಿ.19 (ಉಡುಪಿ ಟೈಮ್ಸ್ ವರದಿ) : ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಕಪ್ ತ್ರೋಬಾಲ್ ಚಾಂಪಿಯನ್ಶಿಪ್ ನಲ್ಲಿ ಉಡುಪಿಯ ವೈಷ್ಣವಿ ಜಿ. ಸುವರ್ಣ ಅವರು ವರ್ಲ್ಡ್ ತ್ರೋಬಾಲ್ ಫೆಡರೇಶನ್ ವತಿಯಿಂದ ಮಹಿಳಾ ವಿಭಾಗದಲ್ಲಿ ವರ್ಲ್ಡ್ ಬೆಸ್ಟ್ ತ್ರೋ ಬಾಲ್ ಪ್ಲೇಯರ್ 2022 ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಫ್ರೆಂಡ್ಸ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಡಿ.15 ರಿಂದ ಡಿ.17ರವರೆಗೆ ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಕಪ್ ತ್ರೋಬಾಲ್ ಚಾಂಪಿಯನ್ಶಿಪ್ ನಲ್ಲಿ ಉಡುಪಿಯ ವೈಷ್ಣವಿ ಜಿ. ಸುವರ್ಣ ಅವರು ಕರ್ನಾಟಕದಿಂದ ಆಯ್ಕೆಯಾಗಿ ಭಾರತ ತಂಡವನ್ನು ಪ್ರತಿನಿಧಿಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗೋವಿಂದ ಮೆಂಡನ್ ಮತ್ತು ಬೇಬಿ ಸುವರ್ಣ ಇವರ ಮಗಳಾದ ವೈಷ್ಣವಿ ಜಿ. ಸುವರ್ಣ ಅವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರ ಹಾರಾಡಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನ ಎಸ್.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿದ್ದಾರೆ. ಬಾಲ್ಯದಿಂದಲೂ ಕ್ರೀಡೆ ಮತ್ತು ಓದಿನಲ್ಲಿ ಆಸಕ್ತಿ ತೊಡಗಿಸಿಕೊಂಡಿರುವ ಇವರು ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ. ಚತ್ತೀಸ್ಗಡದಲ್ಲಿ ನಡೆದ ರಾಷ್ಟ್ರೀಯ ತ್ರೋಬಾಲ್ ಪಂದ್ಯಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಮತ್ತು ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾರೆ.
ಹಾಗೂ 2022-23ನೇ ಸಾಲಿನಲ್ಲಿ ರಾಜಸ್ಥಾನದಲ್ಲಿ ನಡೆದ 45ನೇ ಸೀನಿಯರ್ ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಇದರೊಂದಿಗೆ ಮೂರು ಬಾರಿ ಕರ್ನಾಟಕ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಅಲ್ಲದೆ ಜಾವೆಲಿನ್, ಗುಂಡು ಎಸೆತ, ಚಕ್ರ ಎಸೆತ ದಲ್ಲಿ ಕೂಡ ರಾಜ್ಯಮಟ್ಟದಲ್ಲಿ ಬಹುಮಾನಗಳಿಸಿದ್ದಾರೆ. ಬರೀ ಕ್ರೀಡೆ ಅಲ್ಲದೆ ಓದಿನಲ್ಲಿ ಮುಂದಿರುವ ಇವರು ಈ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 569(94.83 ಶೇ.) ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.