ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ಪ್ರಕರಣ: ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಬಂಧನ

ಚಿತ್ರದುರ್ಗ ಡಿ.17 : ಮುರುಘಾ ಮಠದ ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸೌಭಾಗ್ಯ ಬಸವರಾಜನ್ ಅವರು ಮಠದ ಮಾಜಿ ಅಡಳಿತಾಧಿಕಾರಿ ಎಸ್ .ಕೆ ಬಸವರಾಜನ್ ಅವರ ಪತ್ನಿಯಾಗಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದರು. ದಾವಣಗೆರೆಯಲ್ಲಿ ಇವರನ್ನು ವಶಕ್ಕೆ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ಚಿತ್ರದುರ್ಗದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಅವರನ್ನು ಕಳುಹಿಸಿದ್ದಾರೆ.

ನ. 9 ರಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಅವರು ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ನೀಡಲು ಸೌಭಾಗ್ಯ ಬಸವರಾಜನ್ ಪ್ರಚೋದಿಸಿದ್ದರು ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಜೊತೆಗೆ ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ ಆಡಿಯೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಬಸವರಾಜೇಂದ್ರ ಅವರನ್ನು ಬಂಧಿಸಿ ಪೋಲಿಸರು ವಿಚಾರಣೆಯನ್ನು ನಡೆಸಿದ್ದರು. ಬಳಿಕ ನ.10 ರಂದು ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಅವರನ್ನು ಬಂಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!