5, 8ನೇ ತರಗತಿಗೆ ಪೂರಕ ಪರೀಕ್ಷೆ ಆದೇಶ ಹಿಂಪಡೆದ ಶಿಕ್ಷಣ ಇಲಾಖೆ
ಬೆಂಗಳೂರು, ಡಿ.15 : ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದಲ್ಲಿ 5 ಹಾಗೂ 8ನೇ ತರಗತಿಗೆ ನಿಗದಿಪಡಿಸಲಾಗಿದ್ದ ಪೂರಕ ಪರೀಕ್ಷೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಈ ಹಿಂದಿನ ಆದೇಶವನ್ನು ಹಿಂಪಡೆದಿರುವ ಶಿಕ್ಷಣ ಇಲಾಖೆ ಪೂರಕ ಪರೀಕ್ಷೆ ಬದಲಾಗಿ ಶಾಲಾ ಹಂತದಲ್ಲೇ ಅದೇ ಅವಧಿಯಲ್ಲಿ ಪರಿಹಾರ ಬೋಧನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಹಿಂದೆ ಸರಕಾರ ನೀಡಿದ ಆದೇಶದ ಪ್ರಕಾರ ಮೌಲ್ಯಾಂಕನ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಜೂನ್-ಜುಲೈ ತಿಂಗಳ ಅಂತ್ಯದಲ್ಲಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲೇ ನಡೆಸಲು ಸೂಚಿಸಲಾಗಿತ್ತು.