ಜಿ.ಪಂ, ತಾಲೂಕು ಪಂ. ಚುನಾವಣೆ ವಿಳಂಬ: ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ
ಬೆಂಗಳೂರು ಡಿ.14 : ಜಿ.ಪಂ, ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ವಿಳಂಬ ಮಾಡುತ್ತಿರುವ ಕಾರಣ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದೆ.
ಜಿ.ಪಂ, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂದಿಸಿ ಪದೇ ಪದೇ ಕಾಲಾವಕಾಶ ಕೇಳಿದ ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗದ ನಡೆಗೆ ಹೈ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, 24 ವಾರ ಕಾಲಾವಕಾಶ ನೀಡಿದರೂ ಸರ್ಕಾರ ಒಂದಿಂಚು ಮುಂದಕ್ಕೆ ಹೋಗಿಲ್ಲ. ಸರ್ಕಾರದ ಈ ನಡೆ ನ್ಯಾಯಾಲಯದ ಆದೇಶಗಳನ್ನು ನಿಷ್ಕ್ರೀಯಗೊಳಿಸುವಂತಹದ್ದಾಗಿದೆ ಎಂದು ಹೇಳಿದೆ ಹಾಗೂ ಜ.30ರಗೆ ತಾ.ಪಂ, ಜಿ.ಪಂ ಕ್ಷೇತ್ರ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗಡುವು ನೀಡಿದೆ. ಇದರೊಂದಿಗೆ ಜಿ.ಪಂ, ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ವಿಳಂಬ ಮಾಡುತ್ತಿರುವ ಕಾರಣಕ್ಕೆ ಸರಕಾರಕ್ಕೆ 5 ಲಕ್ಷ ದಂದ ವಿಧಿಸಿದೆ ಎಂದು ತಿಳಿದು ಬಂದಿದೆ.