ಶಿಳ್ಳೆಕ್ಯಾತರ ಸಮಸ್ಯೆ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ

ಸಾಗರ(ಉಡುಪಿಟೈಮ್ಸ್ ವರದಿ) :ಶಿವಮೊಗ್ಗ ಜಿಲ್ಲೆಯ ಸಾಗರದ  ಗೌತಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಡ್ಯಾಮ್ ಹೊಸೂರು ಪ್ರದೇಶದಲ್ಲಿ ಕಳೆದ ಹಲವು  ವರ್ಷಗಳಿಂದಲೂ   ಶಿಳ್ಳೇಕ್ಯಾತ ಜನಾಂಗದವರು ಸೂರಿಗಾಗಿ ಪರದಾಡುತ್ತಿದ್ದಾರೆ.  ಇದೀಗ ಈ ಪ್ರದೇಶಕ್ಕೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಲುಗದ್ದೆ ಅವರು ಭೇಟಿ ನೀಡಿ ಶಿಳ್ಳೆಕ್ಯಾತ ಜನಾಂಗದ ಸಮಸ್ಯೆಗಳನ್ನು ಆಲಿಸಿದ್ದಾರೆ.

    ಈ ಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಸುಮಾರು 13 ಶಿಳ್ಳೆಕ್ಯಾತ ಕುಟುಂಬದವರು, ಹಲವು ವರ್ಷಗಳಿಂದಲೂ  ಮನೆ ನಿರ್ಮಿಸಲು ಜಾಗ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತಿದ್ದರು. ಆದರೆ ಇವರ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಅರುಣ್ ಕುಮಾರ್ ಕಲ್ಲುಗದ್ದೆ ಅವರು ಶಿಳ್ಳೆಕ್ಯಾತ ಕುಟುಂಬಗಳ ಸಮಸ್ಯೆಯನ್ನು ಅರಿತು, ಗೌತಮಪುರ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಾಣಿಶ್ರೀ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಇಲ್ಲಿನ ಕುಟುಂಬಗಳಿಂದ ಅರ್ಜಿಯನ್ನು ಪಡೆದು ಸರಕಾರದಿಂದ ಸಿಗುವ ಜಾಗವನ್ನು ಮಂಜೂರು ಮಾಡಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!