ಬ್ರಹ್ಮಾವರ: ವಿವಾಹಿತ ಮಹಿಳೆ ನಾಪತ್ತೆ
ಬ್ರಹ್ಮಾವರ: ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದ ಹಾರಾಡಿಯ ಕುಕ್ಕುಡೆ ಯಲ್ಲಿ ನಡೆದಿದೆ.ಸೌಮ್ಯ (23)ನಾಪತ್ತೆ ಯಾದ ಮಹಿಳೆ. ಇವರು ಕಳೆದ ಒಂದು ತಿಂಗಳಿನಿಂದ ಬ್ಯುಟಿಷಿಯನ್ ಕೋರ್ಸ್ ಮಾಡುತ್ತಿದ್ದರು.
ಎಂದಿನಂತೆ ಜ. 1 ರಂದು ಕೋರ್ಸ್ ಗೆ ಹೋಗುತ್ತಿದ್ದು ಬರುವಾಗ ಸ್ವಲ್ಪ ತಡವಾಗುತ್ತದೆ ಎಂದು ತಮ್ಮ ಅಕ್ಕನ ಬಳಿ ಹೇಳಿ ಮನೆಯಿಂದ ತೆರಳಿದ್ದಾರೆ. ಆ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.