ಪ್ರಧಾನಿ ಮೋದಿಯವರ 5 ವರ್ಷಗಳ ಪ್ರವಾಸದ ಖರ್ಚಿನ ಮಾಹಿತಿ ಇಲ್ಲಿದೆ

ನವದೆಹಲಿ ಡಿ.9 : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷದಲ್ಲಿ ಕೈಗೊಂಡ ವಿದೇಶಿ ಪ್ರವಾಸದ ಖರ್ಚಿನ ಲೆಕ್ಕಪತ್ರವನ್ನು ಕೇಂದ್ರ ಸರಕಾರ ಸಂಸತ್‍ಗೆ ನೀಡಿದೆ.

ರಾಜ್ಯಸಭೆಯಲ್ಲಿ ಕೇರಳದ ಸಿಪಿಐ(ಎಂ) ಸದಸ್ಯ ಎಳಮರಂ ಕರೀಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರ ಇಲಾಖೆಯ ರಾಜ್ಯ ಸಚಿವ ವಿ. ಮುರಳೀಧರನ್ ಅವರು, ಕೆಲ ದಿನಗಳ ಹಿಂದಷ್ಟೇ ಇಂಡೋನೇಷ್ಯಾದಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಆ ಪ್ರವಾಸಕ್ಕೆ ಕೆ. 32,09,760 ರೂ. ವೆಚ್ಚವಾಗಿದೆ. ಸೆಪ್ಟೆಂಬರ್ 26-28ರ ಜಪಾನ್ ಪ್ರವಾಸಕ್ಕೆ 23,86,536 ರೂ. ವೆಚ್ಚವಾಗಿದೆ. ಹಾಗೂ ಇದೇ ವರ್ಷದಲ್ಲಿ ಪ್ರಧಾನಿಯವರ ಯೂರೋಪ್ ಪ್ರವಾಸಕ್ಕೆ 2,15,61,304 ರೂ. ಖರ್ಚಾಗಿದೆ. 2019 ಸೆಪ್ಟೆಂಬರ್ 21-28 ರ ನಡುವಿನ ಅಮೆರಿಕ ಪ್ರವಾಸಕ್ಕೆ ಕೆ 2,15,61,304 ರೂ. ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾತ್ರವಲ್ಲದೆ `ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವು, ಮಿತ್ರ ರಾಷ್ಟ್ರಗಳ ಜತೆಗಿನ ಸಂಬಂಧ ಗಟ್ಟಿಗೊಳಿಸಿದ್ದಲ್ಲದೇ, ಭಾರತ ದೃಷ್ಟಿಕೋನವನ್ನು ಪ್ರಸ್ತುತ ಪಡಿಸಲು ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಜಾಗತಿಕ ಕಾರ್ಯಸೂಚಿ ರೂಪಿಸಲು ಸಹಾಯಕವಾಗಿದೆ’ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!