ಮಲ್ಪೆ: ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಯುವ ಜನತೆ ಮನಸ್ಥಿತಿ ಬದಲಾಗಬೇಕು- ರಘುಪತಿ ಭಟ್

ಮಲ್ಪೆ, ಡಿ.5 (ಉಡುಪಿ ಟೈಮ್ಸ್ ವರದಿ) : ಮಲ್ಪೆ ಬೀಚ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ವರ್ಷಾಚರಣೆ ಸಂಭ್ರಮ ಕಾರ್ಯಕ್ರಮ ಹಾಗೂ 2ನೇ ವಿಂಚ್ ಪ್ಯಾರಾಸೈಲಿಂಗ್ ಬೋಟ್ ನ ಉದ್ಘಾಟನೆ ಸಮಾರಂಭ ಶನಿವಾರ ಸಂಜೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ| ಜಿ. ಶಂಕರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗೋವಾ ಮತ್ತು ಕೇರಳ ಮಾದರಿಯಲ್ಲಿ ಮಲ್ಪೆ ಬೀಚ್‍ನಲ್ಲೂ ಹೊಸತನದ ಜಲಕ್ರೀಡೆಗಳು ಆರಂಭಗೊಳ್ಳುತ್ತಿದ್ದು ಜನಾರ್ಕಷಣೆ ಪಡೆದುಕೊಳ್ಳುತ್ತಿವೆ. ಇಂದು ಮೀನುಗಾರಿಕೆಗಿಂತ ಪ್ರವಾಸೋದ್ಯಮವೇ ಹೆಚ್ಚು ಲಾಭದಾಯಕವಾಗುತ್ತಿದ್ದು ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ರಘುಪತಿ ಭಟ್ ಅವರು ಮಾತನಾಡಿ,ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಯುವ ಜನತೆ ಮನಸ್ಥಿತಿ ಬದಲಾಗಬೇಕು. ಕರಾವಳಿ ಭಾಗದ ಮನೆಯವರು ಹೋಂಸ್ಟೇ ಮಾಡುವ ಮೂಲಕ ಮೀನುಗಾರಿಕೆ ಜೊತೆಗೆ ಪ್ರವಾಸೋದ್ಯಮ ನಡೆಸಲು ಮುಂದೆ ಬರಬೇಕು. ಇದಕ್ಕೆ ಪೂರಕ ಸಹಕಾರವನ್ನು ನೀಡಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ನ್ಯಾಯಮೂರ್ತಿ ಫಣೀಂದ್ರ ಅವರು, ಸಭೆಯೊಂದರಲ್ಲಿ ವಿದೂಷಕನೊಬ್ಬ ತನ್ನ ಹಾಸ್ಯ ಚಟಾಕಿಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದನು. ಸಭೆಯಲ್ಲಿರುವ ಎಲ್ಲರೂ ನಗುತ್ತಿದ್ದರೆ ಒಬ್ಬ ಮಾತ್ರ ಗಂಭೀರವಾಗಿದ್ದನಂತೆ. ಇದನ್ನು ನೋಡಿದವರೊಬ್ಬರು `ನೀವು ಮಾತ್ರ ಯಾಕೆ ನಗಲಿಲ್ಲ’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅವರು ಆತ (ವಿದೂಷಕ) ನನ್ನದಾಯಾದಿಯಾದ ಕಾರಣ ನಕ್ಕಿಲ್ಲ ಅವನ ಹಾಸ್ಯಗಳೆಲ್ಲವೂ ನನ್ನ ಮನಃಪಟಲದಲ್ಲಿವೆ. ಮನೆಗೆ ಹೋಗಿ ನಗುತ್ತೇನೆ’ ಎಂದನಂತೆ ಎಂದು ಹೇಳಿ ಈ ಇದು ಸಮಾಜ ಎಷ್ಟರಮಟ್ಟಿಗೆ ದ್ವೇಷವನ್ನು ಹೊರ ಹಾಕುತ್ತಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು ಹಾಗೂ ಸಮಾಜವನ್ನು ತಿದ್ದುವಲ್ಲಿ ವಕೀಲರ ಸೇವೆ ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಲ್ಪೆ-ಉಡುಪಿ ಭಾಗದ 150 ಕ್ಕೂ ಅಧಿಕ ಎಸ್.ಎಸ್.ಎಲ್.ಸಿ, ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಉದ್ಯಾವರ ಮತ್ತು ಮಲ್ಪೆಯ ಶಾಲೆಗೆ ಪೀಠೋಪಕರಣ ವಿತರಿಸಲಾಯಿತು. ಹಾಗೂ ಸ್ಥಳೀಯ ಕ್ರೀಡಾ ಮತ್ತು ಶೈಕ್ಷಣಿಕ ಯುವ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‍ನ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ಹಾಗೂ ನಾಮ ನಿರ್ದೆಶಿತ ಸದಸ್ಯ ವಿಜಯ ಕುಂದರ್, ಮಲ್ಪೆ ಸೆಂಟ್ರಲ್ ವಾರ್ಡ್‍ನ ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಕೊಡವೂರು ವಾಡ್9ನ ವಿಜಯ ಕೊಡವೂರು, ಕಲ್ಮಾಡಿ ವಾರ್ಡ್ ನ ಸುಂದರ್ ಜೆ. ಕಲ್ಮಾಡಿ, ಹಿಂದೂ ಯುವಸೇನೆಯ ಜಿಲ್ಲಾಧ್ಯಕ್ಷ ಮಂಜು ಕೊಳ, ಮಂತ್ರ ಟೂರಿಸಂ ಮತ್ತು ಮಲ್ಪೆ ಬೀಚ್ ನಿರ್ವಾಹಕರ ಆಡಳಿತ ನಿರ್ದೇಶಕ ಸುದೇಶ್ ಶೆಟ್ಟಿ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ವಿನಯ ಕರ್ಕೇರ, ಕರಾವಳಿಯ ವಿವಿಧ ಭಜನ ಮಂದಿರಗಳ ಅಧ್ಯಕ್ಷರಾದ ವಿಕ್ರಮ್ ಟಿ. ಶ್ರೀಯಾನ್, ಜ್ಞಾನೇಶ್ವರ್ ಕೋಟ್ಯಾನ್, ದಯಾನಂದ ಕಾಂಚನ್, ಧನಂಜಯ್ ಸಾಲ್ಯಾನ್ ಉಪಸ್ಥಿತರಿದ್ದರು.

ಯತೀಶ್ ಮಟ್ಟು ಸ್ವಾಗತಿಸಿದರು. ಸತೀಶ್ಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ಅಡ್ಡೆಂಚರ್ ವಾಟರ್ ಸ್ಪೋರ್ಟ್ಸ್ ನ ಆಡಳಿತ ನಿರ್ದೇಶಕ ಸನತ್ ಸಾಲ್ಯಾನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!