ಕೊಂಕಣ ರೈಲ್ವೆ ಮಂಗಳೂರು-ಮುಂಬೈ ಚಳಿಗಾಲದ ಸಾಪ್ತಾಹಿಕ ವಿಶೇಷ ರೈಲಿನ ವೇಳಾ ಪಟ್ಟಿ

ಮಂಗಳೂರು ಡಿ.5: ಕೇಂದ್ರ ರೈಲ್ವೆಯ ಸಹಯೋಗದೊಂದಿಗೆ ಕೊಂಕಣ ರೈಲ್ವೆ ವತಿಯಿಂದ ಮುಂಬೈ ಮತ್ತು ಮಂಗಳೂರು ನಡುವೆ ಚಳಿಗಾಲದಲ್ಲಿ ಸಂಚರಿಸಲಿರುವ ಸಾಪ್ತಾಹಿಕ ವಿಶೇಷ ರೈಲುಗಳ ವೇಳಾ ಪಟ್ಟಿ ಪ್ರಕಟಗೊಂಡಿದೆ.

ಹೆಚ್ಚುವರಿ ಪ್ರಯಣೀಕರನ್ನು ತೆರವುಗೊಳಿಸಲು ಆರಂಭಗೊಂಡಿರುವ ವಿಶೇಷ ರೈಲುಗಳ ವೇಳಾ ಪಟ್ಟಿ ಹೀಗಿದೆ.

ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ: ರೈಲು ನಂ. 01453 ಲೋಕಮಾನ್ಯ ತಿಲಕ್ (ಟರ್ಮಿನಲ್) – ಮಂಗಳೂರು ಜಂಕ್ಷನ್ ವಿಶೇಷ (ಸಾಪ್ತಾಹಿಕ), ಲೋಕಮಾನ್ಯ ತಿಲಕ್ (ಟಿ) ನಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ: ರೈಲು ನಂ. 01454 ಮಂಗಳೂರು ಜಂಕ್ಷನ್ – ಲೋಕಮಾನ್ಯ ತಿಲಕ್ (ಟಿ) ವಿಶೇಷ (ಸಾಪ್ತಾಹಿಕ), ಮಂಗಳೂರಿನಿಂದ ಸಂಜೆ 6.45 ಕ್ಕೆ ಹೊರಡಲಿದೆ. ರೈಲು ಲೋಕಮಾನ್ಯ ತಿಲಕ್ (ಟಿ) ನ್ನು ಮರುದಿನ ಮಧ್ಯಾಹ್ನ 2.25 ಕ್ಕೆ ತಲುಪುತ್ತದೆ.

ರೈಲುಗಳು ಒಟ್ಟು 17 ಕೋಚ್‍ಗಳನ್ನು ಹೊಂದಿರುತ್ತವೆ. ಹಾಗೂ ಒಂದು ಎರಡು ಹಂತದ ಎಸಿ ಕೋಚ್ ಇರುತ್ತದೆ, ಮೂರು ಹಂತದ ಎಸಿಯ ಮೂರು ಕೋಚ್‍ಗಳು, ಎಂಟು ಸ್ಲೀಪರ್ ಕೋಚ್‍ಗಳು, ಮೂರು ಸೆಕೆಂಡ್ ಸೀಟಿಂಗ್ ಕೋಚ್‍ಗಳು ಮತ್ತು ಎರಡು ಎಸ್.ಎಲ್.ಆರ್ (ಸೀಟಿಂಗ್ ಕಮ್ ಲಗೇಜ್ ರೇಕ್) ಇರಲಿದೆ.

ಈ ರೈಲುಗಳು ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!