ಮದುವೆ ಮಂಟಪದಲ್ಲೇ ಹೃದಯ ಸ್ತಂಭನದಿಂದ ಕುಸಿದು ಬಿದ್ದು ವಧು ಮೃತ್ಯು

ಲಕ್ನೋ ಡಿ.5 : ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಮೃತಪಟ್ಟ ಘಟನೆ ಲಕ್ನೋದಲ್ಲಿ ನಡೆದಿದೆ.

ಮೃತ ವಧುವನ್ನು ಲಕ್ನೋದ ಭದ್ವಾನ ಗ್ರಾಮದ ರಾಜ್ ರಾಜ್ ಪಾಲ್ ಎಂಬವರ ಮಗಳು ಶಿವಾಂಗಿ (20) ಎಂದು ಗುರುತಿಸಲಾಗಿದೆ.

ಶಿವಾಂಗಿ ಕಾರ್ಡಿಯಾಕ್‌ ಅರೆಸ್ಟ್‌ ನಿಂದಾಗಿ (ಹೃದಯ ಸ್ತಂಭನ) ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಡಿ.3 ರಂದು ಶಿವಾಂಗಿ ಅವರ ವಿವಾಹ ವಿವೇಕ್ ಎಂಬವರೊಂದಿಗೆ ನಡೆಯುತ್ತಿತ್ತು. ಮದುವೆ ಸಂಭ್ರಮದಲ್ಲಿ ವೇದಿಕೆಗೆ ಬಂದ ವಧು ಶಿವಾಂಗಿ ವರನಿಗೆ ಹಾರ ಹಾಕುತ್ತಿದ್ದಂತೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಆತಂಕಗೊಂಡ ಪೋಷಕರು ಶಿವಾಂಗಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಶಿವಾಂಗಿಯನ್ನು ತುರ್ತಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಹೇಳಿದ್ದಾರೆ. ಆದರೆ ಶಿವಾಂಗಿಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆಯೇ ಅವರು ಕೊನೆಯುಸಿರು ಎಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಧು ಕುಸಿದು ಬಿದ್ದ ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!