ಪರ್ಕಳ: ಟೂರಿಸ್ಟ್ ಕಾರುಗಳಿಗೆ ಡಿಕ್ಕಿ ಹೊಡೆದ ಲಾರಿ: ಪ್ರಯಾಣಿಕರು ಪಾರು

ಪರ್ಕಳ ಡಿ.5 (ಉಡುಪಿ ಟೈಮ್ಸ್ ವರದಿ) : ಚಾಲಕನ ನಿಯಂತ್ರಣ ತಪ್ಪಿದ ಭತ್ತದ ಮೂಟೆ ಹೊತ್ತ ಲಾರಿಯೊಂದು ಎರಡು ಟೂರಿಸ್ಟ್ ಕಾರಿನ ಮೇಲೆಯೇ ಎರಗಿ ಒಂದು ಕಾರ್  ಸಂಪೂರ್ಣ ಜಖಂ ಗೊಂಡಿರುವ ಘಟನೆ ಪರ್ಕಳದ ಕೆಳಪರ್ಕದಲ್ಲಿರುವ ನಗರಸಭೆಯ ನೀರಿನ ರೇಚಕದ ಎದುರು ನಡೆದಿದೆ.  

ಉಡುಪಿಯಿಂದ ಹೆಬ್ರಿ ಕಡೆಗೆ ಭತ್ತದ ಮೂಟೆ ಹೊತ್ತ ಲಾರಿ ಸಂಚರಿಸುತ್ತಿತ್ತು.  ಅಪಘಾತದದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆಯೆಲ್ಲಾ ಚೆಲ್ಲಾಡಿದೆ. ಅಪಘಾತಕ್ಕೆ ಒಳಗಾದ ಒಂದು ಟೂರಿಸ್ಟ್ ಕಾರು ಉಡುಪಿಯ ನಿಲ್ದಾಣಕ್ಕೆ ಸೇರಿದ್ದಾಗಿದ್ದು,  ಮತ್ತೊಂದು ಸಂತೆಕಟ್ಟೆಯ ನಿಲ್ದಾಣಕ್ಕೆ ಸೇರಿದ್ದಾಗಿದೆ ಎಂದು ಪ್ರಥಮ ಮಾಹಿತಿಯಿಂದ  ತಿಳಿದು ಬಂದಿದೆ. 

ಈ ರೀತಿ ಹಿಂದೆಯೂ ಈ ಭಾಗದಲ್ಲಿ ವಾಹನ ಅಪಘಾತ ಘಟನೆ ನಡೆದಿದೆ. ಹೊಸ ರಸ್ತೆಯ ಕಾಮಗಾರಿ ನಡೆಸುತ್ತಿರುವಾಗಲೇ ವಾಹನ ಸಂಚಾರ ಮಾಡಿ ಕೊಟ್ಟಿರುವುದೇ ಇಲ್ಲಿ ಸಮಸ್ಯೆ ಕಂಡು ಬಂದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮತ್ತು ವಾಹನ ಸಂಚಾರ ಮಾಡಿ ಪರಿಸರವೆಲ್ಲ ಧೂಳಿನಿಂದ ಕೂಡಿದೆ. ಈ ಬಗ್ಗೆ ಸ್ಥಳೀಯರು ನಿನ್ನೆ ಮಣಿಪಾಲ ಠಾಣೆಗೆ ದೂರು ಸಹ ನೀಡಿದ್ದರು.  ಹೀಗಿದ್ದರೂ ಹಳೆಯ ರಸ್ತೆಯಲ್ಲಿ ಸಂಚರಿಸುವಂತೆ ಯಾವುದೇ ಸುರಕ್ಷತಾ ಬೋರ್ಡ್ ಗಳಿಲ್ಲ. ವಾಹನ ಚಾಲಕರು ಗೊಂದಲಕ್ಕೀಡಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹಾಗೂ ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ, ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಇಲ್ಲಿ ಗೊಂದಲ ಉಂಟಾಗುತ್ತದೆ. ಹೊಸ ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿ ಕೊಟ್ಟಿರುತ್ತಾರೆ. ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ಮತ್ತು ರಕ್ಷಣಾ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ. ಅಲ್ಲದೆ ಸೂಕ್ತ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲ. ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಅಥವಾ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂದು ಗೊಂದಲ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. 

Leave a Reply

Your email address will not be published. Required fields are marked *

error: Content is protected !!