ಮಂಗಳೂರು:ದೈವಸ್ಥಾನ ಕಾಣಿಕೆ ಹುಂಡಿಯಲ್ಲಿ ನೋಟುಗಳ ಮೇಲೆ ಅಸಭ್ಯ ಬರಹ
ಮಂಗಳೂರು: ನಗರದ ಹೊರವಲಯದ ದೈವಸ್ಥಾನಗಳಲ್ಲಿ ಚಲಾವಣೆ ಇಲ್ಲದ ನೋಟುಗಳ ಮೇಲೆ ಅಸಭ್ಯ ವಾಗಿ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಮಂಗಳೂರು ಹೊರ ವಲಯದಲ್ಲಿರುವ ಕೊಟ್ಟಾರ ಚೌಕಿ ಬಳಿ ಇರುವ ಕಲ್ಲುರ್ಟಿ,ಪಂಜುರ್ಲಿ, ಹಾಗೂ ಅತ್ತಾವರ ಸನಿಹದ ಕೋಟೆದ ಬಬ್ಬುಸ್ವಾಮಿ ದೈವಸ್ಥಾದಲ್ಲಿ ಪಾಪಿಗಳು ಈ ವಿಕೃತಿ ಮೆರೆದಿದ್ದಾರೆ.
ಈ ದೈವಸ್ಥಾದ ಕಾಣಿಕೆ ಡಬ್ಬಿಗೆ 200, 20, 10 ರುಪಾಯಿ ನೋಟಿನಲ್ಲಿ ಅಸಭ್ಯ ಬರಹಗಳನ್ನು ಬರೆದು ಹಾಕಿದ್ದು ಅಲ್ಲದೆ ಕಾಂಡೋಮ್ ನ್ನು ಕೂಡ ಕಾಣಿಕೆ ಡಬ್ಬಿಗೆ ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ನೋಟುಗಳ ಮೇಲೆ ಯೇಸು ಕ್ರಿಸ್ತ ಮಾತ್ರ ದೇವರು. ಹಂದಿಗಳಂತಿರುವ ಹಿಂದೂಗಳು ಮುಸಲ್ಮಾನರ ಕೈಯಲ್ಲಿ ಸಿಲುಕಿ ಹಾಕಿಕೊಂಡಿದ್ದೀರಿ. ಮುಸಲ್ಮಾರನ್ನು, ಹಂದಿಗಳಂತಿರುವ ಹಿಂದೂಗಳು ಅಟ್ಟಾಡಿಸಿ ಹೊಡೆದು ಕೊಲ್ಲಬೇಕು ಎಂದು ಬರೆಯಲಾಗಿದೆ. ಅಲ್ಲದೆ ಕಾಣಿಕೆ ಡಬ್ಬಿಯಲ್ಲಿ ಹಿಂದೂ ದೇವರುಗಳನ್ನು ನಿಂದಿಸಿ ಬರೆದಿರುವ ಸುಧೀರ್ಘ ಪತ್ರವೊಂದು ಸಿಕ್ಕಿದ್ದು , ಇದು ಪ್ರಭು ಏಸು ಕ್ರಿಸ್ತನ ಪರವ್ ಫುಲ್ ಪ್ರವಾದಿಗಳ ಪ್ರಕಟಣೆ ಎಂದು ಆರಂಭಿರುವ ಪತ್ರವೊಂದು ಸಿಕ್ಕಿದ್ದು, ಪತ್ರದುದ್ದಕ್ಕೂ ಹಿಂದೂಗಳಿಗೆ ಅವಮಾನ ಮಾಡಲಾಗಿದೆ.