ಮಣಿಪಾದಲ್ಲಿ ನೂತನ ನ್ಯೂ ಮಣಿಪಾಲ್ ಸರ್ವೀಸ್ ಸೆಂಟರ್ ಆರಂಭ

ಉಡುಪಿ ಡಿ.2 (ಉಡುಪಿ ಟೈಮ್ಸ್ ವರದಿ): ಮಣಿಪಾಲ-ಉಡುಪಿ ರಸ್ತೆಯ ಲಕ್ಷ್ಮೀಂದ್ರ ನಗರದಲ್ಲಿ ನೂತನವಾಗಿ ನ್ಯೂ ಮಣಿಪಾಲ್ ಸರ್ವೀಸ್ ಸೆಂಟರ್ ಶುಭಾರಂಭಗೊಂಡಿದೆ.

ನೂತನ ಸರ್ವೀಸ್ ಸೆಂಟರ್ ನ್ನು ಗುಂಡಿಬೈಲುವಿನ ಸ್ವರಾಜ್ ಸೌಹಾರ್ಧ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ರವಿ ಕೃಷ್ಣ ಶೆಟ್ಟಿ ಹಾಗೂ ಅಂಬಪಾಡಿ ಉದ್ಯಮಿ ಸದಾಶಿವ ಶೆಟ್ಟಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸರ್ವೀಸ್ ಸೆಂಟರ್‍ನ ಮಾಲಕರಾದ ಪ್ರಶಾಂತ್ ಕುಮಾರ್ ಪೂಜಾರಿ, ಅಝೀಝ್ ಪಡುಬಿದ್ರೆ, ಶೈಲೇಶ್ ಶೆಟ್ಟಿ, ಜೀವನ್ ಡಿಸೋಜಾ ಅವರು ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ತಹರದ ವಾಹನಗಳಿಗೆ ಸರ್ವೀಸ್ ನೀಡಲಾಗುತ್ತದೆ. ಹಾಗೂ ಇತರೆಡೆಗಳಿಗಿಂತ ಕಡಿಮೆ ದರದಲ್ಲಿ ವಾಹನಗಳಿಗೆ ಫಾಮ್ ವಾಶ್, ಡೇಸೆಲ್ ವಾಶ್, ಫುಲ್ ಬಾಡಿ ವಾಶ್ ಮತ್ತು ಸ್ಟೀಮ್ ವಾಶ್ ನಂತಹ ಸರ್ವೀಸ್ ಗಳನ್ನು ನೀಡಲಾಗುತ್ತದೆ. ವಾಹನಗಳ ಕ್ಲೀನಿಂಗ್ ಗೆ ಯಾವುದೇ ಕೆಮಿಕಲ್ ರಹಿತವಾದ ಉತ್ತಮ ನೀರನ್ನು ಬಳಸಲಾಗುತ್ತದೆ. ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಸರ್ವೀಸ್ ಸೆಂಟರ್ ತೆರೆದುಕೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 7899693022 ಅಥವಾ 9538528070 ಮೊಬೈಲ್ ನಂಬರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!