ಸ್ನೇಹಿತರಿಗೆ ಚಿಕನ್ ಹಾಕದ್ದಕ್ಕೆ ರಾದ್ಧಾಂತ: ಮದುವೆಯನ್ನೇ ರದ್ದಿಗೆ ಮುಂದಾರ ವರ

ಹೈದಾರಾಬಾದ್ ನ.30 : ಮದುವೆಯ ಔತನಕೂಟದಲ್ಲಿ ತನ್ನ ಸ್ನೇಹಿತರಿತರಿಗೆ ಊಟದೊಂದಿಗೆ ಕೋಳಿ ಖಾದ್ಯ ನೀಡಿಲ್ಲ ಎಂದು ವರನೋರ್ವ ಕೋಪಗೊಂಡು ಮದುವೆ ರದ್ದು ಮಾಡಲು ಮುಂದಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಜಗದ್ಗಿರಿಗುಟ್ಟದಲ್ಲಿ ರಿಂಗ್ಬಸ್ತಿ ಮೂಲದ ಗಂಡು ಹಾಗೂ ಬಿಹಾರದ ಮಾರವಾಡಿ ಸಮುದಾಯದ ಹುಡುಗಿ ನಡುವೆ ಮದುವೆ ನಿಗದಿ ಆಗಿತ್ತು. ಮದುವೆಯ ಒಂದು ದಿನದ ಹೆಣ್ಣಿನ ಕಡೆಯವರು ಗಂಡಿನ ಕಡೆಯ ಆಪ್ತರಿಗೆ ಭಾನುವಾರ (ನ.27) ರಾತ್ರಿ ಶಹಪುರನಗರದ ಹಾಲ್ ವೊಂದರಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಮಾರವಾಡಿ ಸಮುದಾಯ ಆದ ಕಾರಣ ಹೆಣ್ಣಿನ ಕಡೆಯವರು ಊಟಕ್ಕೆ ಸಸ್ಯಹಾರಿ ಪದಾರ್ಥವನ್ನು ಮಾಡಿದ್ದರು. ಕೆಲವರು ಊಟ ಮಾಡಿದ್ದಾರೆ. ಆದರೆ ಗಂಡಿನ ಸ್ನೇಹಿತರು ಚಿಕನ್ ಯಾಕಿಲ್ಲ. ನಮಗೆ ಚಿಕನ್ ಬೇಕೆಂದು ಹಾಲ್ ನಲ್ಲೇ ರಾದ್ಧಾಂತ ಮಾಡಿದ್ದು ಮಾತ್ರವಲ್ಲದೆ ಊಟ ಮಾಡದೇ ಹಾಗೆಯೇ ಸಿಟ್ಟಿನಲ್ಲಿ ಹೊರ ಹೋಗಿದ್ದಾರೆ.

ಈ ವಿಚಾರ ವರ ಹಾಗೂ ಅವರ ಮನೆಯವರೆಗೆ ಅವಮಾನದಂತಾಗಿತ್ತು. ಹೆಣ್ಣಿನ ಕಡೆಯವರಲ್ಲಿ ಮಾತುಕತೆ ನಡೆಸಿದಾಗ ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಮದುವೆ ಗಂಡು ನಾನು ಮದುವೆ ಆಗಲ್ಲ ಎಂದು ಹಟ ಹಿಡಿದು, ಹಾಲ್ ನಿಂದ ಹೊರ ಹೋಗಿದ್ದಾನೆ. ಬಳಿಕ ಗಂಡಿನ ಕಡೆಯವರು ಈ ರೀತಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಮದುವೆಯನ್ನು ರದ್ದು ಮಾಡಿರುವುದರಿಂದ ಹೆಣ್ಣಿನ ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಪೊಲೀಸರು ಎರಡೂ ಕುಟುಂಬದವನ್ನು ಕೂರಿಸಿಕೊಂಡು, ಸಮಾಧಾನಪಡಿಸಿ, ಮದುವೆಯನ್ನು ನ.30ಕ್ಕೆ ನಿಗದಿ ಮಾಡಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!