ವಾಟ್ಸ್ ಆ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್

ನವದೆಹಲಿ ನ.30 : ಇತ್ತೀಚೆಗಷ್ಟೇ ವಾಟ್ಸ್ ಆ್ಯಪ್ ಕಮ್ಯುನಿಟಿ ಎಂಬ ಹೊಸ ಫೀಚರ್ ನೀಡಿದ್ದ ಪ್ರಸಿದ್ಧ ಸಂವಹನ ಜಾಲತಾಣ ವಾಟ್ಸ್ ಆ್ಯಪ್ ನಲ್ಲಿ ಇದೀಗ ಮತ್ತೊಂದು ಹೊಸ ಫೀಚರ್ ಕಾಣಬಹುದಾಗಿದೆ.

“ವಾಟ್ಸ್ ಆ್ಯಪ್ ಪೋಲ್” ಎಂಬ ಮತ್ತೊಂದು ಹೊಸ ಫೀಚರ್ ನ್ನು ವಾಟ್ಸ್ ಆ್ಯಪ್ ನೀಡಿದ್ದು ಇದರ ಆಯ್ಕೆಯನ್ನು ಈಗಾಗಲೇ ಆಂಡ್ರಾಯ್ಡ್ ಮತ್ತು ಐಫೋನ್‍ಗಳಲ್ಲಿ ನೀಡಿದೆ. ಹಾಗೂ ಈ ಹೊಸ ಫೀಚರ್ ನ್ನು ಡೆಸ್ಕ್ ಟಾಪ್ ಆವೃತ್ತಿಯಲ್ಲೂ ಪಡೆಯಬಹುದಾಗಿದೆ.

ಹೊಸ ಫೀಚರ್ ಬಗ್ಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈಯಕ್ತಿಕ ಚಾಟ್ ಮತ್ತು ಗ್ರೂಪ್‍ಗಳಲ್ಲಿ ವಾಟ್ಸ್ ಆ್ಯಪ್ ಪೋಲ್ ಆಯ್ಕೆ ಇರುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಸಂದೇಶ ಕಳುಹಿಸಿ, ಅಭಿಪ್ರಾಯ ಕೇಳುವ ಬದಲು, ಆ್ಯಪ್ ಪೋಲ್ ಆಯ್ಕೆ ಮೂಲಕವೇ ಸುಲಭದಲ್ಲಿ ತಿಳಿದುಕೊಳ್ಳಬಹುದಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಬಳಕೆದಾರರು ಡೆಸ್ಕ್ ಟಾಪ್ ಮಾದರಿಯಲ್ಲಿ ಇರುವ ಕ್ಲಿಪ್ ಅಟ್ಯಾಚ್ ಆಯ್ಕೆ ಕ್ಲಿಕ್ ಮಾಡಿದರೆ, ಅಲ್ಲಿ ಪೋಲ್ ರಚಿಸುವ ಆಪ್ಶನ್ ಕಾಣಿಸಿಕೊಳ್ಳುತ್ತದೆ. ಒಂದು ಪ್ರಶ್ನೆಯನ್ನು ನೀಡಿದ ಬಳಿಕ, ನಂತರ ಅದಕ್ಕೆ ಆಯ್ಕೆಗಳನ್ನು ರಚಿಸಲು ಅವಕಾಶವಿದೆ. ಒಂದು ಪೋಲ್‍ನಲ್ಲಿ 12 ರವರೆಗೆ ಆಯ್ಕೆಗಳನ್ನು ನೀಡಬಹುದು. ಅದಾದ ಬಳಿಕ ಸೆಂಡ್ ಕೊಟ್ಟರೆ ಸಾಕು.

ಇದರಲ್ಲಿ ನಿಮ್ಮ ಪೋಲ್‍ಗೆ ಎಷ್ಟು ಮತ ಬಂದಿದೆ, ಯಾವ ಆಯ್ಕೆಗಳಿಗೆ ಆದ್ಯತೆ ನೀಡಲಾಗಿದೆ ಎನ್ನುವುದು ಕಾಣಿಸುತ್ತದೆ. ಮೊಬೈಲ್ ನಲ್ಲಿ ಇರುವಂತೆಯೇ, ಇಲ್ಲೂ ಕೂಡ ಬಳಕೆದಾರರು ಒಂದಕ್ಕಿಂತ ಹೆಚ್ಚಿನ ಆಯ್ಕೆ ಕ್ಲಿಕ್ ಮಾಡಬಹುದು. ಪೋಲ್ ಫಾರ್ವಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!