ಮಲ್ಪೆ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

ಮಲ್ಪೆ ನ.30 (ಉಡುಪಿ ಟೈಮ್ಸ್ ವರದಿ) : ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಲವಂತ ಬಾಯ್ ತಾಂಡೇಲಾ (58) ಮೃತಪಟ್ಟವರು.

ಗುಜರಾತ್ ನಲ್ಲಿ ಮಗನೊಂದಿಗೆ ವಾಸವಾಗಿದ್ದ ಇವರು 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ನ.26 ರಂದು ಅನಾರೋಗ್ಯಕ್ಕೆ ಒಳಗಾದ ಬಲವಂತ ಬಾಯ್ ತಾಂಡೇಲ ಅವರನ್ನು ಸಮಾಜ ಸೇವಕ ವಿಶು ಶೆಟ್ಟಿ ರವರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನ.28 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಈಶ್ವರ ಬಾಯ್ ತಾಂಡೇಲಾ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!