ಹಿರಿಯಡ್ಕ: ದ್ವಿಚಕ್ರ ವಾಹನಕ್ಕೆ ಟೆಂಪೋ ಡಿಕ್ಕಿ ಸವಾರ ಮೃತ್ಯು

ಹಿರಿಯಡ್ಕ ನ.28 (ಉಡುಪಿ ಟೈಮ್ಸ್ ವರದಿ) : ದ್ವಿಚಕ್ರ ವಾಹನಕ್ಕೆ ಟೆಂಪೋ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟ ದ್ವಿಚಕ್ರ ವಾಹನ ಸವಾರನನ್ನು ರಾಜೇಶ ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಆತ್ರಾಡಿ-ಕುಕ್ಕೆಹಳ್ಳಿ ರಸ್ತೆ ಕಡೆಯಿಂದ ಬೈಲು ಮನೆ ರಸ್ತೆಯಲ್ಲಿ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದ ಟೆಂಪೋ ಕುಕ್ಕಿಕಟ್ಟೆ ಕಡೆಯಿಂದ ಬರುತ್ತಿದ್ದ ರಾಜೇಶ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ರಾಜೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಟೆಂಪೋ ಚಾಲಕನನ್ನು ಅಶೋಕ್ ಕುಲಾಲ್ ಕುಕ್ಕೆಹಳ್ಳಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ಥಳೀಯ ಕುಮಾರ್ ಆರ್. ಶೆಟ್ಟಿ ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!