ಮಣಿಪಾಲ: ಪೊಲೀಸರ ಕಣ್ಣೆದುರೇ ಬೈಕ್ ಸವಾರನ ವೀಲಿಂಗ್ ಸಾಹಸ: ದೂರು ದಾಖಲು
ಮಣಿಪಾಲ ನ.28 (ಉಡುಪಿ ಟೈಮ್ಸ್ ವರದಿ): ಶಿವಳ್ಳಿ ಗ್ರಾಮದ ಶೀಂಬ್ರ ಬ್ರಿಡ್ಜ್ ಬಳಿ ಪೊಲೀಸರ ಕಣ್ಣೆದುರೇ ಬೈಕ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಬಂದ ಬೈಕ್ ಸವಾರನ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೀನ ಸಾಲಿಯಾನ್ ರವರು ಇತರ ಸಿಬ್ಬಂದಿಗಳೊಂದಿಗೆ ನಿನ್ನೆ ಸಂಜೆ ಶಿವಳ್ಳಿ ಗ್ರಾಮದ ಶೀಂಬ್ರ ಬ್ರಿಡ್ಜ್ ಬಳಿ ಸಂಜೆಯ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಬೈಕ್ ಸವಾರನೋರ್ವ ತನ್ನ ಬೈಕ್ ನಲ್ಲಿ ಮಣಿಪಾಲದ ಕಡೆಯಿಂದ ಹಾವಂಜೆ ಕಡೆಗೆ ವ್ಹೀಲಿಂಗ್ ಮಾಡುತ್ತಾ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ಅಜಾಗರೂಕತೆಯಿಂದ ಬೈಕ್ ನ್ನು ಚಲಾಯಿಸಿಕೊಂಡು ಬಂದಿದ್ದನು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಆತನಲ್ಲಿ ಬೈಕ್ ನ್ನು ನಿಲ್ಲಿಸಲು ಸೂಚಿಸಿದರೂ ಆತ ಬೈಕ್ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.