ಕೋಟ: ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಕೋಟ ನ.28 (ಉಡುಪಿ ಟೈಮ್ಸ್ ವರದಿ): ಠಾಣಾ ವ್ಯಾಪ್ತಿಯ ಬನ್ನೇರಳಕಟ್ಟೆಯ ಮಾನ್ಯ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಬನ್ನೇರಳಕಟ್ಟೆಯ ಮಾನ್ಯ ಎಂಬಲ್ಲಿರುವ ಸುಶೀಲಾ ಹೆಗ್ಡೆ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. 15 ದಿನಗಳ ಹಿಂದೆ ಸುಶೀಲಾ ಹೆಗ್ಡೆ ರವರು ತಮ್ಮ ಹಿರಿ ಮಗಳೊಂದಿಗೆ ಶಿವಮೊಗ್ಗಕ್ಕೆ ಹೋಗಿದ್ದರು. ಇತ್ತ ಮನೆಯಲ್ಲಿ ವಾಸಿಸುತ್ತಿದ್ದ ಸಂದೀಪ್ ಆಚಾರಿ ಅವರು ತಮ್ಮ ಊರಿನಲ್ಲಿ ಹೊಸತಾಗಿ ನಿಮಾಣ ಮಾಡುತ್ತಿರುವ ಮನೆ ನಿರ್ಮಾಣದ ಕಾರ್ಯ ರಾತ್ರಿ ಕೂಡಾ ಇದ್ದುದರಿಂದ ತಾವು ವಾಸವಿದ್ದ ಸುಶೀಲಾ ಹೆಗ್ಡೆ ರವರ ಮನೆಗೆ ಬೀಗ ಹಾಕಿ ಸಂಸಾರ ಸಮೇತ ಅಲ್ಲಿಗೆ ಹೋಗಿದ್ದರು.
ಈ ನಡುವೆ ನ.26 ರ ಸಂಜೆಯಿಂದ ನ.27 ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಸುಶೀಲಾ ಹಗ್ಡೆ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಕಳ್ಳರು ಮನೆಯ ಬಾಗಿಲುಗಳನ್ನು ಒಡೆದು ಒಳ ನುಗ್ಗಿದ ಕಳ್ಳರು ಕಳತನಕ್ಕೆ ಯತ್ನಿಸಿದ್ದಾರೆ ಎಂದು ಸಂದೀಪ್ ಆಚಾರಿ ಎಂಬವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.