ಉಡುಪಿ: ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಕರಾವಳಿ ಜನರು ಜಾಗೃತರಾಗಬೇಕು: ಪೇಜಾವರ ಶ್ರೀ

ಉಡುಪಿ ನ.28 : ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಕರಾವಳಿ ಜನರು ಜಾಗೃತರಾಗಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಿಂದಾಗಿ ಕರಾವಳಿಯಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳ ಬಗ್ಗೆ ಮಾಹಿತಿ ತಿಳಿಯುತ್ತಿದೆ. ಹೀಗಾಗಿ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು. ಯಾವುದೇ ಸಂದೇಹಾಸ್ಪದ ಚಟುವಟಿಕೆಗಳು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಹಾಗೂ ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗ ಮಂಡಲದಂತಹ ಹಲವಾರು ಉತ್ಸವ ನಡೆಯುತ್ತವೆ. ಹೀಗಾಗಿ ಜನಸಂದಣಿ ಹೆಚ್ಚಿರುವ ಸಮಾರಂಭ ನಡೆಯುತ್ತದೆ. ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಸದಾ ಜಾಗೃತರಾಗಿಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!