50 ಕೋಟಿ ವಾಟ್ಸ್ ಆ್ಯಪ್ ಬಳಕರದಾರರ ಮಾಹಿತಿ ಸೋರಿಕೆ: ವರದಿ

ನವದೆಹಲಿ ನ.28 : 50 ಕೋಟಿ ವಾಟ್ಸ್ ಬಳಕೆದಾರರ ದೂರವಾಣಿ ಸಂಖ್ಯೆ ಸೋರಿಕೆಯಾಗಿರುವ ಆತಂಕಕಾರಿ ಸುದ್ದಿಯೊಂದು ವರದಿಯಾಗಿದೆ.

ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸ್ ಬಳಕೆದಾರರ ದೂರವಾಣಿ ಸಂಖ್ಯೆ ಮಾರಾಟಕ್ಕಿಟ್ಟಿದೆ ಎಂದು ಸಾಮಾಜಿಕ ಮಾಧ್ಯಮವೊಂದು ವರದಿ ಮಾಡಿದೆ. ಹಾಗೂ 84 ದೇಶಗಳ ವಾಟ್ಸ್ ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿ ಮಾರಾಟಕ್ಕೆ ಲಭ್ಯವಿದೆ. ಅಮೆರಿಕದ 3.2 ಕೋಟಿ ಬಳಕೆದಾರರ ಮಾಹಿತಿ ಹಾಗೂ, ಈಜಿಪ್ಟ್, ಇಟಲಿ, ಫ್ರಾನ್ಸ್, ಯುಕೆ, ರಷ್ಯಾ ಮತ್ತು ಭಾರತದ ಬಳಕೆದಾರರ ಮಾಹಿತಿಯೂ ಲಭ್ಯವಿದೆ ಎಂದು ಜಾಹಿರಾತು ಮೂಲಕ ಹ್ಯಾಕಿಂಗ್ ವೇದಿಕೆ ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಮಾತ್ರವಲ್ಲದೆ ಈ ಜಾಹಿರಾತುವಿನಲ್ಲಿ ಅಮೆರಿಕದ ದಾಖಲೆ ಸೆಟ್ 7,000 ಡಾಲರ್‍ಗೆ, ಯುಕೆ ದಾಖಲೆ ಮೌಲ್ಯ 2500 ಡಾಲರ್ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಜಾಹೀರಾತುದಾರರನ್ನು ಸಂಪರ್ಕಿಸಿದಾಗ ಬ್ರಿಟನ್ ನ 1,097 ಸಂಖ್ಯೆಗಳನ್ನು ಪುರಾವೆಯಾಗಿ ಹಂಚಿಕೊಂಡಿದ್ದಾರೆ. ಮಾಧ್ಯಮ ಸಂಸ್ಥೆಯಿಂದ ಈ ನಂಬರ್ ಗಳನ್ನು ಪರೀಕ್ಷಿಸಲಾಗಿದ್ದು ಎಲ್ಲವೂ ವಾಟ್ಸ್ ಆ್ಯಪ್ ಸಂಖ್ಯೆಗಳೆಂದು ಖಚಿತವಾಗಿದೆ ಎಂಬುದಾಗಿ ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಹ್ಯಾಕರ್ ಸಂಸ್ಥೆ ಸಾರ್ವಜನಿಕರ ಮಾಹಿತಿಗಳನ್ನು ಹೇಗೆ ಪಡೆದಿದೆ ಎಂಬ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಬಳಕೆದಾರರು ಅಪರಿಚಿತ ಲಿಂಕ್ ಗಳಿಗೆ ಕ್ಲಿಕ್ ಮಾಡಿದಾಗ ಇಂತಹ ಮಾಹಿತಿಗಳನ್ನು ಪಡೆದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!