ಹಿರಿಯಡ್ಕ:1.45 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳವು: ಹೊಮ್ ನರ್ಸ್ ಮೇಲೆ ದೂರು

ಹಿರಿಯಡ್ಕ ನ.25 (ಉಡುಪಿ ಟೈಮ್ಸ್ ವರದಿ) : ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ವಯೋವೃದ್ಧರೊಬ್ಬರ ಕುತ್ತಿಗೆಯಲ್ಲಿದ್ದ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಳವಾಗಿದ್ದು ಇವರನ್ನು ನೋಡಿಕೊಳ್ಳಲು ನೇಮಿಸಿದ್ದ ಹೋಮ್ ನರ್ಸ್ ಈ ಸರವನ್ನು ಕಳವು ಗೈದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಾಳ್ಳಿ ಎಂಬಾಕೆಯನ್ನು ಹೋಂ ನರ್ಸ್ ಆಗಿ ನೇಮಿಸಿದ್ದರು.

ಅ.20 ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಂಡಿದ್ದು, ನ.21 ರಂದು ಸಂಜೆ ವೇಳೆ ರೇಖಾ ಹೆಬ್ಬಳ್ಳಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದಳು. ಬಳಿಕ ವಸಂತ ಶೆಟ್ಟಿ ಅವರು ಸರಸ್ವತಿ ಅವರ ಬಳಿ ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ 1,45,000 ರೂ ಮೌಲ್ಯದ ಚಿನ್ನದ ಚೈನ್ ಕಂಡು ಬಂದಿಲ್ಲ. ಈ ಬಗ್ಗೆ ರೇಖಾಳಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ. ಅದರಂತೆ ವಸಂತ ಶೆಟ್ಟಿ ಅವರ ತಾಯಿಯ ಚಿನ್ನದ ಚೈನ್ ಕಳವಾಗಿದ್ದು ಚೈನನ್ನು ರೇಖಾ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!