ಛಾಯಾ ಧರ್ಮ ಜಾಗೃತಿಯ ಮೂಲಕ ಸಂಚಲನ ಮೂಡಿಸಿದ ಉಡುಪಿಯ ಛಾಯಾಗ್ರಾಹಕರು: ವಿಜಯ ಕೊಡವೂರು

ಉಡುಪಿ ನ.17 (ಉಡುಪಿ ಟೈಮ್ಸ್ ವರದಿ) : ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಉಡುಪಿ ವಲಯದ 28ನೇ ಸಂವತ್ಸರ ಸಡಗರ ಕಾರ್ಯಕ್ರಮ ಉಡುಪಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಗರಸಭಾ ಸದಸದಸ್ಯ ವಿಜಯ ಕೊಡವೂರು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಛಾಯಾ ಧರ್ಮ ಜಾಗೃತಿಯ ಮೂಲಕ ಪಾಳು ಬಿದ್ದಿರುವ ದೇವರ ಛಾಯಾಚಿತ್ರಗಳನ್ನು ವ್ಯವಸ್ಥೆ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯದ ಸದಸ್ಯರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಛಾಯಾಗ್ರಾಹಕರ ಬಹುದಿನದ ಬೇಡಿಕೆಯಾದ ಸ್ವಂತ ಕಟ್ಟಡಕ್ಕೆ ನಿವೇಶನ ದೊರಕಿಸಿ ಕೊಡುವಲ್ಲಿ ಕಾರ್ಯಯೋನ್ಮುಖರಾಗಿದ್ದೇವೆ ಎಂದರು.

ಈ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ವಿತರಣೆ ನೆರವೇರಿಸಿ, ಇಂದಿನ ದಿನಗಳಲ್ಲಿ ಛಾಯಾಗ್ರಾಹಕರ ಅಗತ್ಯತೆಯ ಬಗ್ಗೆ ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾರವರು ವಲಯ ನಿರ್ಮಿಸಿದ ಬದುಕು ಬಂಗಾರ ಕಿರು ಚಿತ್ರವನ್ನು ಲೋಕಾರ್ಪಣೆಗೊಳಿಸಿ ಛಾಯಾಗ್ರಹಕರ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕಾಂತಾರದ ಕಮಲಕ್ಕ ಖ್ಯಾತಿಯ ಮಾನಸಿ ಸುಧೀರ್, ಕೆಪಿಎಯಿಂದ ಪುರಸ್ಕೃತರಾದ ಕೆ ನವೀನ್ ಚಂದ್ರ ಬಲ್ಲಾಳ್, ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ರಿಯಾ ಗಣೇಶ್ ಅವರನ್ನು ಅಭಿನಂದಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಜನಾರ್ದನ ಕೊಡವೂರು, ರಾಘವೇಂದ್ರ ಸೇರಿಗಾರ್, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಜಿಲ್ಲಾ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿತೇಶ್ ಕಿದಿಯೂರು, ಯುವರಾಜ್ ದುಬೈ, ಕೆ. ವಾಸುದೇವ ರಾವ್, ಆಸ್ಟ್ರೋ ಮೋಹನ್, ವಾಮನ ಪಡುಕೆರೆ, ಸುಧೀರ್ ಎಂ ಶೆಟ್ಟಿ, ಪ್ರವೀಣ್ ಹೂಡೆ, ಪ್ರವೀಣ್ ಕೊರೆಯ, ಪ್ರಕಾಶ್ ಶೆಟ್ಟಿ, ಅಶೋಕ್ ಪುತ್ರನ್, ಪ್ರವೀಣ್ ಹರಿಖಂಡಿಗೆ, ಮಂಜು ಪರ್ಕಳ, ದಾಮೋದರ ಸುವರ್ಣ, ಸತೀಶ್ ಸೇರಿಗಾರ್, ಹರೀಶ್ ಅಲೆವೂರ್, ಸಂದೀಪ್ ಕಾಮತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!