ಮಣಿಪಾಲ: ನ.17-20ರ ವರೆಗೆ ಕೆನರಾ ಸ್ವಾಗತ್ ಮೇಳ

ಮಣಿಪಾಲ: ನ.17-20ರ ವರೆಗೆ ಕೆನರಾ ಸ್ವಾಗತ್ ಮೇಳ ಮಣಿಪಾಲ ನ.17(ಉಡುಪಿ ಟೈಮ್ಸ್ ವರದಿ): ಕೆನರಾ ಬ್ಯಾಂಕ್ ಮಹಿಳಾ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಇಡಿ ಸೆಲ್) ಮಣಿಪಾಲ ಇದರ ವತಿಯಿಂದ ನ.19 ರಿಂದ ನ.21 ರವರೆಗೆ ಬೆಳಗ್ಗೆ 10 ರಿಂದ ಸಂಜೆ 6.30 ರವರೆಗೆ ಕೆನರಾ ಸ್ವಾಗತ್ ಮೇಳವನ್ನು ಬ್ಯಾಂಕ್ ನ ವೃತ್ತ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಮಹಿಳಾ ಉದ್ಯಮಿ ಹಾಗೂ ಸ್ವಸಹಾಯ ಸಂಘಗಳಿಂದ ತಯಾರಿಸಲ್ಪಟ್ಟ ಉಡುಪುಗಳು, ಸೀರೆಗಳು, ಆಯುರ್ವೇದ ಉತ್ಪನ್ನಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳ, ಗೃಹಾಲಂಕಾರ ವಸ್ತುಗಳು, ಕೃತಕ ಅಭರಣಗಳು, ಟೆರಾಕೋಟ ವಸ್ತುಗಳು, ಉಣ್ಣೆ ವಸ್ತುಗಳು, ಚಿತ್ರಕಲೆ/ಕುಂಭಕಲಾ ವಸ್ತುಗಳು, ಪರಿಸರ ಸ್ನೇಹಿ ವಸ್ತುಗಳು, ಪ್ರಸಾದನ ಸಾಮಾಗ್ರಿಗಳು, ಹಾಗೂ ವಿವಿಧ ಆಕರ್ಷಕ ಉತ್ಪನ್ನಗಳನ್ನು ಹೆಚ್ಚು ಆಕರ್ಷಕ ಬೆಲೆಗಳಲ್ಲಿ ಮಾರಾಟ ನಡೆಸಲಾಗುತ್ತದೆ.

ಮಣಿಪಾಲ, ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಹಕರಿಗೆ ಕೆನರಾ ಸ್ವಾಗತ್ ಮೇಳಕ್ಕೆ ಉಚಿತ ಪ್ರವೇಶ ನೀಡಲಾಗಿದ್ದು ಎಲ್ಲಾ ನಾಗರಿಕರು ಮೇಳದ ಪ್ರಯೋಜನವನ್ನು ಪಡೆಯಬೇಕೆಂದು ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ನ ಮಹಾ ಪ್ರಬಂಧಕರಾದ ರಾಮ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

error: Content is protected !!