ಶಿವಮೊಗ್ಗ: ಮೀಟರ್ ಹಾಕದೆ ಡಿಸಿ,ಎಸ್ಪಿಗೆ 200 ರೂ. ಬಾಡಿಗೆ ಕೇಳಿದ ಆಟೋ ಚಾಲಕ

ಶಿವಮೊಗ್ಗ ನ.16 : ಕೆಲವು ಆಟೋ ಚಾಲಕರು ಮೀಟರ್ ಹಾಕದೇ ಪ್ರಯಾಣಿಕರಿಂದ ಹೆಚ್ಚಿನ ಹಣ ಕೇಳಿರುವ ಘಟನೆಗಳ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಇಂತಹ ಘಟನೆಯ ಅನುಭವಗಳನ್ನು ಸಾಮಾನ್ಯ ಪ್ರಯಾಣಿಕರು ಮಾತ್ರವಲ್ಲ. ಜಿಲ್ಲಾಧಿಕಾರಿಯಂತಹ ಅಧಿಕಾರಿಗಳೂ ಎದುರಿಸಿದ್ದಾರೆ.

ಆಟೋ ಪ್ರಯಾಣ ದರ ಏರಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಡಿಸಿ ಸೆಲ್ವಮಣಿ ಅವರು ಈ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅವರಿಗೆ ಆಟೋ ಚಾಲಕನೋರ್ವ ಮೀಟರ್ ಹಾಕದೆ 200 ರೂ. ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದ ಎಂದು ಆರೋಪಿಸಿದ್ದಾರೆ. ಹಾಗೂ ಮೀನಾಕ್ಷಿ ಭವನದಿಂದ ನಾನು ಮತ್ತು ಎಸ್ಪಿ ಆಟೋದಲ್ಲಿ ಡಿಸಿ ಕಚೇರಿಗೆ ತೆರಳಲು ಎಷ್ಟಾಗುತ್ತದೆ ಎಂದು ಕೇಳಿದೆವು. ಈ ವೇಳೆ ಮೀಟರ್ ಹಾಕದೆ 200 ರೂ.ಗೆ ಡಿಮ್ಯಾಂಡ್ ಮಾಡಿದ್ದಾನೆ. ಮೀಟರ್ ಹಾಕುವುದಿಲ್ವ ಎಂದು ಕೇಳಿದಾಗ ಇಲ್ಲ ಎಂದು ಹೇಳಿದ್ದಾನೆ ಎಂದು ನೆನಪಿಸಿಕೊಂಡಿದ್ದಾರೆ.

ಹಾಗೂ ರಿಕ್ಷಾಗಳಲ್ಲಿ ಕಡ್ಡಾಯವಾಗಿ ಮೀಟರ್ ಗಳ ಅಳವಡಿಕೆ ಮಾಡಬೇಕು, ಜನರಿಂದ ಹೆಚ್ಚು ಹಣ ಸುಲಿಗೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಜೊತೆಗೆ ಹೆಚ್ಚು ಜನರನ್ನು ಆಟೋಗಳಲ್ಲಿ ಕೂರಿಸಿಕೊಂಡು ಹೋಗುವಂತಿಲ್ಲ, ಟ್ರಾಫಿಕ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!